11:00 AM Wednesday5 - November 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ…

ಇತ್ತೀಚಿನ ಸುದ್ದಿ

ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

19/08/2025, 23:50

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnata@gnail.com

ಧರ್ಮಸ್ಥಳ ಎಂದರೆ ಕೊಲೆಗಡಕರ ಹಾಗೂ ಅತ್ಯಾಚಾರಿಗಳು ಎಂದು ಬಿಂಬಿಸುವ ಕೆಲಸ ಆಗುತ್ತಿತ್ತು.
ಆ ಕುತಂತ್ರಿಗಳ ಕುತಂತ್ರವನ್ನು ಬಯಲು ಮಾಡುವುದಕ್ಕಾಗಿ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸಾವಿರಾರು ಜನರು ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಧರ್ಮಸ್ಥಳ ನಮ್ಮ ಶ್ರದ್ಧಾ ಕೇಂದ್ರ. ಅದಕ್ಕೆ ಮಸಿ ಬಳಿಯಲು ಎಡಪಂಥದ ಕುತಂತ್ರಿಗಳು ಹಾಗೂ ಹಲವು ಜನರು ಇದ್ದಾರೆ. ಹಾಗಾಗಿ ಈ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು. ಏಕೆಂದರೆ ಇದರ ಹಿಂದೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕುಮ್ಮಕ್ಕುಗಳು ಅಡಗಿದೆ
ಇದರಲ್ಲಿ ಭಾಗಿಯಾದರು ಎಲ್ಲರೂ ಹೊರಗೆ ಬರಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಮುಸುದಾರಿಯೇ ಈಗ ಉಲ್ಟಾ ಹೊಡೆಯುತ್ತಿದ್ದಾನೆ. ನಮ್ಮ ಎಸ್ಐಟಿ ತಂಡವು ಅವನು ತಂದ ತಲೆ ಬುರುಡೆಯನ್ನೇ ಎಫ್ ಎಸ್ ಐಎಲ್ ಕೊಟ್ಟಿದ್ದರೆ ಎಲ್ಲದು ಗೊತ್ತಾಗುತ್ತಿತ್ತು. ಪೊಲೀಸರಿಗೆ ಗೊತ್ತಿಲ್ಲದೆ ಹೆಣಗಳನ್ನ ಹೂಡಿದ್ದರೆ ಅವನೇ ಮೊದಲನೇ ಅಪರಾಧಿ.
ನಮ್ಮ ಪೊಲೀಸರಿಗೆ ಇವರನ್ನು ಮಟ್ಟ ಹಾಕುವ ಶಕ್ತಿ ಇದೆ
ಇನ್ನು ಮುಂದೆ ಈ ರೀತಿಯ ದೇವಸ್ಥಾನಗಳಿಗೆ ಅಪಪ್ರಚಾರ ಮಾಡುವ ಧೈರ್ಯ ಯಾರಿಗೂ ಬರಬಾರದು. ಭಾರತದ ಹಿಂದೂ ಸನಾತ ಮೌಲ್ಯಗಳು ಅವಮಾನ ಮಾಡುತ್ತಿದ್ದಾರೆ ಎಂದರು.
ಈ ಪ್ರಕರಣಕ್ಕೆ ಕೇರಳ ಲಿಂಕ್ ಇದೆ, ಎಡಪಂಥೀಯರು ಲಿಂಕ್ ಕೂಡ ಇದೆ, ಕೇರಳ ವಿಧಾನಸಭೆಯಲ್ಲಿ ನಿರ್ಣಯ ಆಗುತ್ತದೆ ಎಂದರೆ ಏನು ಅರ್ಥ? ಅವರಿಗೆ ಏನು ಇಲ್ಲಿ ಕೆಲಸ. ಭಕ್ತರಾಗಿ ಅವರು ಬಂದು ಹೋಗಬೇಕಿತ್ತು ಅದನ್ನು ಬಿಟ್ಟು ಬೇರೆ ರೀತಿಯಲ್ಲಿ ಮಾಡುತ್ತಿದ್ದಾರೆ. ಈ ಹೋರಾಟ ಜಾನಂದೋಲನ ವಾಗಿ ಪರಿವರ್ತನೆಗೊಳ್ಳುತ್ತಿದೆ. ಧರ್ಮಸ್ಥಳದ ಆ ಕುಟುಂಬದ ವಿರುದ್ಧ ಈ ಕೆಲಸ ಮಾಡುತ್ತಿದ್ದಾರೆ. ಶನಿವಾರ ನಾವು ಸಾವಿರಾರು ಕಾರುಗಳ ಮೂಲಕ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ ಎಂದು ಅವರು ನುಡಿದರು.
ಆ ಕುಟುಂಬದ ಪರ ಈಗ ಜನರಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕೈವಾಡ ಈ ಪ್ರಕರಣದಲ್ಲಿ ಕಂಡು ಬಂದಿದೆ. ಹಾಗಾಗಿ ಈ ಪ್ರಕರಣವನ್ನು ಎನ್ಐಎಗೆ ವಹಿಸಲೇಬೇಕು. ಇದರ ಹಿಂದೆ ಬೃಹತ್ ದುಡ್ಡಿನ ಗಂಟಿದೆ ಅದನ್ನು ಕೂಡ ತನಿಖೆ ನಡೆಸಬೇಕು. ಆಗ ಮಾತ್ರ ನಿಜ ಹೊರಗೆ ಬರುತ್ತದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು