ಇತ್ತೀಚಿನ ಸುದ್ದಿ
ದೇವಲಾಪುರ ನಾಡ ಕಚೇರಿಗೆ ದಾನ ರೂಪದಲ್ಲಿ ಜಮೀನು ನೀಡಿದ ರೈತ ಕುಟುಂಬ
19/09/2021, 20:14

ದೇವಲಾಪುರ ಜಗದೀಶ್ ನಾಗಮಂಗಲ ಮಂಡ್ಯ
info.reporterkarnataka@gmail.com
ದೇವಲಾಪುರ ಹೋಬಳಿ ಕೇಂದ್ರದಲ್ಲಿ ಸ್ವಂತ ಕಟ್ಟಡವಿಲ್ಲದೆ ಹಲವು ವರ್ಷಗಳಿಂದ ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಡ ಕಚೇರಿಗೆ ಸ್ವಂತ ಕಟ್ಟಡ ಕಟ್ಟಲು ಬೆಲೆಬಾಳುವ ಜಮೀನನ್ನು ನಾಗೇನಹಳ್ಳಿ ಶಿವಣ್ಣ ಎಂಬ ರೈತರು ದಾನ ಮಾಡಿದ್ದಾರೆ.
ಅವರಿಂದ ನಾಗಮಂಗಲ ತಾಲೂಕು ಉಪ ನೋಂದಣಿ ಕಚೇರಿಯಲ್ಲಿ ತಾಲೂಕು ದಂಡಾಧಿಕಾರಿಗಳ ಹೆಸರಿಗೆ ದೇವಲಾಪುರ ನಾಡಕಚೇರಿಯ ನಿವೇಶನಕ್ಕಾಗಿ ಬೆಲೆಬಾಳುವ ಜಾಗವನ್ನು ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿಯಲ್ಲಿ ದಾನ ರೂಪದಲ್ಲಿ ನೋಂದಣಿ ಮಾಡಿ ದಂಡಾಧಿಕಾರಿ ಕುಂಜಿ. ಅಹಮದ್ ಅವರಿಗೆ ಪತ್ರವನ್ನು ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ದಾನ ಮಾಡಿದ ರೈತ . ಕುಟುಂಬಸ್ಥರು ಶಿಲ್ಪಾ ನಂದೀಶ್, ಶಿವಣ್ಣ, ಜವರೇಗೌಡ, ಚಂದ್ರಮ್ಮ, ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷ ಮಧುಸೂದನ, ರಾಜಸ್ವನಿರೀಕ್ಷಕ ಉಮೇಶ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.