ಇತ್ತೀಚಿನ ಸುದ್ದಿ
ದೇವದುರ್ಗ: ಕೊರೊನಾ ವಾರಿಯರ್ಸ್ ಗೆ ಕೆಪಿಸಿಸಿ ಕಾರ್ಯದರ್ಶಿ ಶ್ರೀದೇವಿ ನಾಯಕರಿಂದ ಸನ್ಮಾನ
17/12/2021, 18:32
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
Info.reporterkarnataka@gmail.com
ಭಾಗ್ಯವಂತಿ ಮಹಿಳಾ ಸಂಘದ ವತಿಯಿಂದ ರಾಯಚೂರು ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಕೊರೊನಾ ಸಂದರ್ಭದಲ್ಲಿ ಶ್ರಮಿಸಿದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ಕೆಪಿಸಿಸಿ ಕಾರ್ಯದರ್ಶಿಗಳು ಶ್ರೀದೇವಿ ರಾಜಶೇಖರ ನಾಯಕ ಅವರು ಸನ್ಮಾನಿಸಿದರು. ಸಂವಾದ ಕಾರ್ಯಕ್ರಮ ಕೂಡ ನಡೆಯಿತು.
ಕಾರ್ಯಕ್ರಮವನ್ನು ಶ್ರೀದೇವಿ ರಾಜಶೇಖರ್ ನಾಯಕ ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಸದಸ್ಯ ಸದಾಶಿವಾಯ ತಾತ ಗಬ್ಬೂರು, ಎಡಬ್ಲ್ಯು ಮಹೇಶ್,ವೈದ್ಯಾಧಿಕಾರಿ ಡಾ.ಪ್ರತಿಭಾ ಪಾಟೀಲ್ ಭಾಗವಹಿಸಿದ್ದರು.














