ಇತ್ತೀಚಿನ ಸುದ್ದಿ
ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ನೂಪುರ್ ಶರ್ಮ ಹೇಳಿಕೆ ಕಾರಣ, ಕ್ಷಮೆಯಾಚಿಸಲಿ: ಸುಪ್ರೀಂ ಕೋರ್ಟ್
01/07/2022, 20:25
ಹೊಸದಿಲ್ಲಿ(reporterkarnataka.com): ಬಿಜೆಪಿ ಉಚ್ಛಾಟಿತ ನಾಯಕಿ ನೂಪುರ್ ಶರ್ಮ ಹೇಳಿಕೆ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಾರಣ,ಆಕೆ ದೇಶದ ಕ್ಷಮೆಯಾಚಿಸಲಿ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ನೂಪರ್ ಶರ್ಮಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್.ಐ.ಆರ್ ಗಳನ್ನು ದೆಹಲಿಗೆ ವರ್ಗಾವಿಸುವಂತೆ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಪ್ರತಿಕ್ರಿಯಿಸಿತು.