10:15 PM Thursday19 - September 2024
ಬ್ರೇಕಿಂಗ್ ನ್ಯೂಸ್
ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು… ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಮಹಿಳಾ ಆಯೋಗದ ಅಧ್ಯಕ್ಷೆ ಬಂದ್ರೂ ಅಧಿಕಾರಿಗಳು ನಾಪತ್ತೆ: ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರ,… ಅಥಣಿ: ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದಾರುಣ… ನಂಜನಗೂಡು: ಭಗೀರಥ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ ಮಂಗಳೂರು: ಸಾಕು ನಾಯಿಯ ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ನೀಡಿದ ಪಾಪಿಗಳು; ವೀಡಿಯೊ ವೈರಲ್…

ಇತ್ತೀಚಿನ ಸುದ್ದಿ

ದೇಶದಲ್ಲಿ ಖಾದ್ಯ ತೈಲದ ಕೊರತೆ ಇದೆಯೇ?: ಕೇಂದ್ರ ಸರಕಾರ ಈ ಕುರಿತು ಹೇಳಿದ್ದೇನು..?

02/05/2022, 11:09

ಹೊಸದಿಲ್ಲಿ(reporterkarnataka.com); ದೇಶದಲ್ಲಿ ಅಡುಗೆ ಎಣ್ಣೆ ಗಗನಕ್ಕೇರಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ದೇಶದಲ್ಲಿ ಖಾದ್ಯ ತೈಲದ ಕೊರತೆ ಇಲ್ಲ ಎನ್ನುವ ಮೂಲಕ ಸ್ವಲ್ಪ ನಿರಾಳ ನೀಡಿದೆ.

ದೇಶದಲ್ಲಿ ಸಾಕಷ್ಟು ಅಡುಗೆ ಎಣ್ಣೆ ಸಂಗ್ರಹವಿದೆ.ಪ್ರಸ್ತುತ 21 ಲಕ್ಷ ಮೆಟ್ರಿಕ್​ ಟನ್​ ಇದ್ದು, ಮೇ ಅಂತ್ಯದೊಳಗೆ ಇನ್ನು 12 ಲಕ್ಷ ಮೆಟ್ರಿಕ್​ ಟನ್​ ಎಣ್ಣೆ ಆಮದಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕಳೆದ ವರ್ಷಕ್ಕಿಂತ ಸೋಯಾಬಿನ್​ ಉತ್ಪಾದನೆಯಲ್ಲಿ ಈ ವರ್ಷ ದುಪ್ಪಟ್ಟಾಗಿದ್ದು, 126.02 ಲಕ್ಷ ಮೆಟ್ರಿಕ್​ ಟನ್​ ಸಂಗ್ರಹವಾಗಿದ್ದು, ಸಾಸಿವೆ ಎಣ್ಣೆ ಸಹ ಶೇ.37ರಷ್ಟು ಅಧಿಕ ಉತ್ಪಾದನೆಯಾಗಿದೆ ಹಾಗಾಗಿ ಸದ್ಯ ಅಡುಗೆ ಎಣ್ಣೆಯ ಕೊರತೆ ಇಲ್ಲ ಎಂದು ಹೇಳಿದೆ.

ಸದ್ಯ ಇಂಡೋನೇಷ್ಯಾಗೆ ರಫ್ತಾಗುತ್ತಿದ್ದನ್ನು ಸ್ಥಗಿತಗೊಳಿಸಿರುವುದರಿಂದ ತಾಳೆ ಎಣ್ಣೆ ಸಹ ಸಾಕಷ್ಟಿದೆ. ಸದ್ಯಕ್ಕೆ ಯಾವುದೇ ಕೊರತೆ ಇಲ್ಲ ಎಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು