ಇತ್ತೀಚಿನ ಸುದ್ದಿ
ದೆಹಲಿ ಯುವತಿಯ ಬರ್ಬರ ಹತ್ಯೆ: ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಖಂಡನೆ
20/11/2022, 10:41

ಮಂಗಳೂರು(reporterkarnataka.com): ದೆಹಲಿಯಲ್ಲಿ ಬೆಳಕಿಗೆ ಬಂದ ಶ್ರದ್ಧಾ ಎಂಬ ಯುವತಿಯನ್ನು ಅಫ್ತಾಬ್ ಎಂಬ ಯುವಕ ಬರ್ಬರ ರೀತಿಯಲ್ಲಿ ಹತ್ಯೆಗೈದ ಘಟನೆಯ ಬಗ್ಗೆ ಮಾಜಿ ಸಚಿವ, ಪ್ರತಿಪಕ್ಷದ ಉಪ ನಾಯಕ ಯು.ಟಿ.ಖಾದರ್ ತೀವ್ರ ಖಂಡಿಸಿದ್ದಾರೆ.
ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಆರೋಪಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ ಖಾದರ್ , ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಸಮಾಜದಲ್ಲಿ ಯುವ ಜನಾಂಗ ಮಾದಕ ವ್ಯಸನಕ್ಕೆ ಒಳಗಾದ ಪರಿಣಾಮ ಇಂಥಹ ಘಟನೆಗಳು ಮರುಕಳಿಸುವುದಕ್ಕೆ ಸಾಕ್ಷಿ.ದುಷ್ಚಟಗಳಿಗೆ ಬಲಿಯಾಗಿ ಯುವ ಜನಾಂಗ ತಮ್ಮ ಜೀವನವನ್ನು ಹಾಳುಗೆಡುವುತ್ತಿದ್ದಾರೆ.ಈ ಬಗ್ಗೆ ಕೇಂದ್ರ ಸರಕಾರ ಎಚ್ಚೆತ್ತುಕೊಂಡು ಮಾದಕ ದ್ರವ್ಯಗಳನ್ನು ಪೂರೈಕೆ ಮಾಡುವವರ ಬಗ್ಗೆ ತೀವ್ರ ನಿಗಾ ವಹಿಸಿ ಹಾಗೂ ಯುವ ಸಮೂಹವನ್ನು ದುಷ್ಚಟದಿಂದ ದೂರ ಇಡಲು ಸೂಕ್ತ ಕಾನೂನನ್ನು ಜಾರಿಗೆ ತರಲಿ ಎಂದು ಖಾದರ್ ಒತ್ತಾಯಿಸಿದ್ದಾರೆ.