9:28 PM Friday3 - October 2025
ಬ್ರೇಕಿಂಗ್ ನ್ಯೂಸ್
ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ… ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಪಟ್ಟದ ಆನೆ, ಕುದುರೆ, ಒಂಟೆಗೂ ಪೂಜೆ

ಇತ್ತೀಚಿನ ಸುದ್ದಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಣ ಗುಂಡಿಗಳು: ಆಡಳಿತದ ವೈಫಲ್ಯತೆ; ಮಾನವೀಯತೆ ಮೆರೆದ ಟ್ರಾಫಿಕ್ ಪೊಲೀಸರು

18/06/2025, 08:18

ವಿಶೇಷ ವರದಿ ಮಂಗಳೂರು

info.reporterkarnataka@gmail.com

ನಗರದ ನಂತೂರು ರಸ್ತೆಯಲ್ಲಿ ಮೂರು ದಿನಗಳ ಹಿಂದೆ ಒಂದು ಅಪಘಾತ ಸಂಭವಿಸಿತು. ಒಬ್ಬರು ಜೀವ ಕಳೆದುಕೊಂಡರು. ಆ ಘಟನೆಯ ಬಳಿಕ, ರಸ್ತೆಯನ್ನು ದುರಸ್ತಿ ಮಾಡುವ ಭರವಸೆ ನೀಡಲಾಯಿತು. ಆದರೆ ಇವತ್ತು, ಅದೇ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಮತ್ತೆ ಕಾಣಿಸಿಕೊಂಡಿವೆ. ಇದು ನಮ್ಮ ಆಡಳಿತದ ವೈಫಲ್ಯವಾದರೆ, ಇನ್ನೊಂದು ಕಡೆ ಈ ಗುಂಡಿಗಳು ಕೇವಲ ಮಣ್ಣಿನ ಹೊಂಡಗಳಲ್ಲ, ಇದು ಭ್ರಷ್ಟಾಚಾರದ ಕಾಮಗಾರಿಯ ಫಲಿತಾಂಶವಾಗಿದೆ.
ದಕ್ಷಿಣ ಕನ್ನಡದ ರಸ್ತೆಗಳ ಕಳಪೆ ಕಾಮಗಾರಿಯನ್ನು ನೋಡಿದರೆ, ಪ್ರಪಂಚದ ಯಾವುದೇ ಮೂಲೆಯಲ್ಲಿ ಇಂತಹ ದಯನೀಯ ಸ್ಥಿತಿಯಿರಲಿಕ್ಕಿಲ್ಲ ಎಂಬಂತೆ ಭಾಸವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೇವಲ ಟೋಲ್ ಸಂಗ್ರಹಕ್ಕೆ ಸೀಮಿತವಾಗಿದೆಯೇ? ರಸ್ತೆ ಸುರಕ್ಷತೆಯ ಜವಾಬ್ದಾರಿಯನ್ನು ಯಾರು ಹೊರಬೇಕು? ಈ ಪ್ರಶ್ನೆಗಳಿಗೆ ಉತ್ತರವಿಲ್ಲದಂತೆ ಕಾಣುತ್ತದೆ. ಎಲ್ಲಿದೆ ದ.ಕ. ಜಿಲ್ಲಾಧಿಕಾರಿ ನೇತೃತ್ವದ ರಸ್ತೆ ಸುರಕ್ಷತಾ ಪ್ರಾಧಿಕಾರ ?
ಈ ಸಂದರ್ಭದಲ್ಲಿ, ನಮ್ಮ ಟ್ರಾಫಿಕ್ ಪೊಲೀಸರ ಕಾರ್ಯವೈಖರಿಯನ್ನು ಮೆಚ್ಚಲೇಬೇಕು. ಬಿಸಿಲಿನಲ್ಲಿ, ಮಳೆಗಾಲದ ತೊಂದರೆಯಲ್ಲಿ, ಅರ್ಧ ಜೀವ ಕಳೆದುಕೊಂಡರೂ, ರಸ್ತೆಯ ಗುಂಡಿಗಳನ್ನು ಕಲ್ಲುಗಳಿಂದ ಮುಚ್ಚುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಇದು ಅವರ ಮಾನವೀಯತೆ ಮತ್ತು ಕರ್ತವ್ಯನಿಷ್ಠೆಯ ಸಂಕೇತವಾಗಿದೆ. ಆದರೆ, ಇದು ಅವರ ಕೆಲಸವೇ? ರಸ್ತೆ ದುರಸ್ತಿಯ ಜವಾಬ್ದಾರಿಯನ್ನು ಟ್ರಾಫಿಕ್ ಪೊಲೀಸರ ಮೇಲೆ ಹೊರಿಸುವುದು ಎಷ್ಟು ಸರಿ?
ನಮ್ಮ ಆಡಳಿತ ಮತ್ತು NHAI ಕಂಬಳಿ ಹಾಕಿ ಮಲಗಿದ್ದರೂ, ಟ್ರಾಫಿಕ್ ಪೊಲೀಸರು ದಿನದ 24 ಗಂಟೆಯೂ ಎಚ್ಚರದಿಂದ ಜನರ ಸುರಕ್ಷತೆಗಾಗಿ ಶ್ರಮಿಸುತ್ತಿದ್ದಾರೆ. ಆದರೆ, ಇದಕ್ಕೆ ಶಾಶ್ವತ ಪರಿಹಾರ ಬೇಕು. ಜನಪ್ರತಿನಿಧಿಗಳು ತಮ್ಮ ಎಸಿ ಕೊಠಡಿಗಳಿಂದ ಹೊರಬಂದು, ಜನಸಾಮಾನ್ಯರ ಕಷ್ಟವನ್ನು ಅರಿಯಬೇಕು. ಭ್ರಷ್ಟಾಚಾರದ ಕಾಮಗಾರಿಯನ್ನು ತಡೆಗಟ್ಟಿ, ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ಯಾರಾದರೂ ತೆಗೆದುಕೊಳ್ಳಬೇಕು.
ಇನ್ನು ಯಾರೂ ರಸ್ತೆ ಗುಂಡಿಗಳಿಗೆ ಬಲಿಯಾಗಬಾರದು. ಸರಕಾರವೇ, ಎಚ್ಚರಿಕೆ! ಇದು ಜನರ ಅಗ್ರಹ

ಇತ್ತೀಚಿನ ಸುದ್ದಿ

ಜಾಹೀರಾತು