ಇತ್ತೀಚಿನ ಸುದ್ದಿ
ದಾವಣಗೆರೆ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆಂಗೋ ಹನುಮಂತಪ್ಪ ನಿಧನ: ಹಲವು ಗಣ್ಯರ ಸಂತಾಪ
30/05/2021, 03:35
ವಿಜಯಪುರ(reporterkarnataka news);ದಾವಣಗೆರೆ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಹಾಗೂ ಬಯಲು ಸೀಮೆಯ ಪ್ರದೇಶ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕೆಂಗೋ ಹನುಮಂತಪ್ಪ ಅವರು ನಿಧನರಾದರು.
ದಾವಣಗೆರೆ ಜಿಲ್ಲೆಯ ಚಿಕ್ಕಬೂದಿಹಾಳದವರಾದ ಹನುಮಂತಪ್ಪ ಅವರು ಕುರುಬರ ಸಂಘದ ಅಧ್ಯಕ್ಷರಾಗಿ ಸಮಾಜದ ಏಳಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ.
ಬಯಲು ಸೀಮೆ ಪ್ರದೇಶ ಮಂಡಳಿಯ ಅಧ್ಯಕ್ಷರಾಗಿದ್ದಾಗ
ತಮ್ಮ ವೀವೆಚನಾ ಕೋಟದಡಿಯಲ್ಲಿ ಬರುವ ಅನುದಾನದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ.
ಶಿರನಾಳ ಗ್ರಾಮದ ಸಂ ನಂ 179 ರಲ್ಲಿ ಹರಿವೂ ಹಳ್ಳಕ್ಕೆ ಅಡ್ಡಲಾಗಿ ಒಂದು ನಾಲ ಬದುಕೆ 2 ಲಕ್ಷ ರೂ. ಅನುದಾನ ಹಂಚಿಕೆ
ಮಾಡಿದ್ದಾರೆ. ಇದರಿಂದ ಇಲ್ಲಿರುವ ಕೋಳವೆ ಬಾವಿಯಲ್ಲಿ ಅಂತರ್ಜಲ ವೃದ್ದಿಯಾಯಿತು.
ಇವರು ಎರಡು ಬಾರಿ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಎಂ ಎಲ್ ಎ ಹಾಗೂ ಎಂಪಿ ಟಿಕೆಟ್ ಗೆ ಪ್ರಯತ್ನಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶ್ಯಾಮನೂರು ಶಿವಶಂಕರಪ್ಪ ಅವರ ಆಪ್ತರಾಗಿದ್ದರು.
ಸದಾ ಹಸನ್ಮುಖಿಯಾದ ಅವರ ನಿಧನದಿಂದ ದೊಡ್ಡ ಮುಖಂಡನ ಕಳೆದುಕೊಂಡಂತಾಗಿದೆ. ದಾವಣಗೆರೆ ಜಿಲ್ಲಾ ಕುರುಬರ ಸಂಘ
ಹಾಗೂ ರಾಜ್ಯ ಕುರುಬರ ಸಂಘಕ್ಕೆ ಭಾರೀ ನಷ್ಟ ಉಂಟಾಗಿದೆ. ಇವರು ದಾವಣಗೆರೆ, ಬಳ್ಳಾರಿ ಮತ್ತು ಹಾವೆರಿ ಜಿಲ್ಲೆಯಲ್ಲಿ ಪ್ರಸಿದ್ಧರಾಗಿದ್ದರು.
ಹನುಮಂತಪ್ಪ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಮಂದಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.