ಇತ್ತೀಚಿನ ಸುದ್ದಿ
ದಾವಣಗೆರೆ: ಕೆರೆಗೆ ಹಾರಿ ಬೆಂಗಳೂರು ಮೂಲದ ಪ್ರೇಮಿಗಳಿಬ್ಬರ ಆತ್ಮಹತ್ಯೆ; ಪ್ರೀತಿಗೆ ಮನೆಯವರ ವಿರೋಧ?
18/08/2022, 18:18
ದಾವಣಗೆರೆ(reporterkarnataka.com): ಇಲ್ಲಿನ ಬೆಂಕಿಕೆರೆ ಗ್ರಾಮದ ಕೆರೆಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ಮೃತಪಟ್ಟ ಪ್ರೇಮಿಗಳನ್ನು ಬೆಂಗಳೂರು ಮೂಲದ ಚರಣ್ ಮತ್ತು ನಾಗವೇಣಿ ಎಂದು ಗುರುತಿಸಲಾಗಿದೆ.
ಚರಣ್ ಮತ್ತು ನಾಗವೇಣಿ ಅವರು ಆ.17ರಂದು ಬೈಕ್ನಲ್ಲಿ ಬೆಂಕಿಕೆರೆ ಗ್ರಾಮದ ಕೆರೆಯ ಬಳಿ ಬಂದಿದ್ದರು. ಚರಣ್ ಬೆಂಗಳೂರಿನಲ್ಲಿ ಇರುವ ತನ್ನ ತಂದೆ ಮತ್ತು ಸ್ನೇಹಿತನಿಗೆ ಫೋನ್ ಮಾಡಿ ಇಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ ಕೆರೆಗೆ ಹಾರಿದ್ದಾರೆ ಎನ್ನಲಾಗಿದೆ.
ನಂತರ ಮನೆಯವರು ನೀಡಿದ ಮಾಹಿತಿ ಪ್ರಕಾರ ಪೊಲೀಸರು ಕೆರೆಯ ಬಳಿ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಯುವಕನ ಬೈಕ್ ಮತ್ತು ಇಬ್ಬರ ಚಪ್ಪಲಿ ಪತ್ತೆಯಾಗಿದ್ದು, ಇಂದು ಬೆಳಗ್ಗೆ ಇಬ್ಬರ ಮೃತದೇಹಗಳು ಪತ್ತೆಯಾಗಿದೆ. ಇವರಿಬ್ಬರ ಪ್ರೀತಿಯನ್ನು ಮನೆಯವರು ವಿರೋಧಿಸಿದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.