ಇತ್ತೀಚಿನ ಸುದ್ದಿ
ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ಗೆ ನಿರೀಕ್ಷಣಾ ಜಾಮೀನು ಮಂಜೂರು: ಬಂಧನ ಭೀತಿಯಿಂದ ಸದ್ಯ ಬಚಾವ್
21/08/2025, 18:06

ಮಂಗಳೂರು(reporterkarnataka.com): ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಯೂಟ್ಯೂಬರ್ ಸಮೀರ್
ಎಂ.ಡಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಜುಲೈ 12ರಂದು ಸಮೀರ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು.
ಇದೇ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಅವರನ್ನು ಬಂಧಿಸಲು ಧರ್ಮಸ್ಥಳ ಪೊಲೀಸರು ಬೆಂಗಳೂರಿನ ಬನ್ನೇರಘಟ್ಟ ಮನೆಗೆ ತೆರಳಿದ್ದರು. ಸಮೀರ್ ಅಲ್ಲಿರಲಿಲ್ಲ. ಅದರೆ, ನಿರೀಕ್ಷಣಾ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಸಮೀರ್ ಅವರನ್ನು ಪೊಲೀಸರ ಬಂಧಿಸುವಂತಿಲ್ಲ. ಈ ನಿರೀಕ್ಷಣಾ ಜಾಮೀನು ಆದೇಶದ ಪ್ರತಿ ಪಡೆದು ಪೊಲೀಸರು ವಿಚಾರಣೆಗೆ ಕರೆಸಿಕೊಳ್ಳಬಹುದು. ವಿಚಾರಣೆ ನಡೆಸಿ ಕಳಿಸಬಹುದು.
ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಲಯ ಯೂಟ್ಯೂಬರ್ ಸಮೀರ್ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.