ಇತ್ತೀಚಿನ ಸುದ್ದಿ
ಧರೆ ಕುಸಿತ: ಪುತ್ತೂರಿನಲ್ಲಿ ಅಪಾಯದ ಸ್ಥಿತಿಯಲ್ಲಿ 2 ಮನೆಗಳು; ನಗರ ಸಭೆ ಅಧ್ಯಕ್ಷ, ಪೌರಾಯುಕ್ತ ಭೇಟಿ
15/07/2021, 17:25
ಪುತ್ತೂರು(reporterkarnataka news) ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಲವು ಕಡೆ ಮಣ್ಣು ಸಡಿಲಗೊಂಡು ಧರೆ ಕುಸಿತ ಹೆಚ್ಚಾಗಿದ್ದು, ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿನ ಬೊಳ್ಳಾನ ಎಂಬಲ್ಲಿ ಧರೆಯೊಂದು ಕುಸಿತಗೊಂಡು ಎರಡು ಮನೆಗಳು ಅಪಾಯದ ಸ್ಥಿತಿಯಲ್ಲಿವೆ.
ಬೊಳ್ಳಾನದಲ್ಲಿ ಧರೆಯ ಮೇಲ್ಭಾಗದಲ್ಲಿರುವ ಜಯಲಕ್ಷ್ಮೀ ಅವರ ಮನೆಯ ಸಮೀಪದ ಧರೆ ಕುಸಿತ ಗೊಂಡಿದ್ದರಿಂದ ಜಯಲಕ್ಷ್ಮೀ ಮತ್ತುಕೆಳಭಾಗದಲ್ಲಿರುವ ನವೀನ್ ಎಂಬವರ ಮನೆ ಅಪಾಯದ ಸ್ಥಿತಿಯಲ್ಲಿದೆ.
ವಿಷಯ ತಿಳಿದ ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಸ್ಥಳೀಯ ಸದಸ್ಯೆ ದೀಕ್ಷಾ ಪೈ, ಪೌರಾಯುಕ್ತ ಮಧು ಎಸ್ ಮನೋಹರ್ ಮತ್ತು ಅಭಿಯಂತರ ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಧರೆ ಕುಸಿತದಿಂದ ಅಪಾಯದ ಸ್ಥಿತಿಯಲ್ಲಿರುವ ಎರಡು ಮನೆಗಳ ರಕ್ಷಣೆಗಾಗಿ ತಾತ್ಕಾಲಿಕ ಪರಿಹಾರವಾಗಿ ಮರಳು ದಿಬ್ಬ ಇಟ್ಟು ಮಣ್ಣು ಕುಸಿತ ಕಡಿಮೆ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.