ಇತ್ತೀಚಿನ ಸುದ್ದಿ
ದಂತಚೋರ, ನರಹಂತಕ ವೀರಪ್ಪನ್ ಸಹಚರರ ತಂಡ ಬಿಡುಗಡೆ?: 32 ವರ್ಷ ಶಿಕ್ಷೆ ಪೂರ್ಣ
15/11/2022, 21:33

ಚೆನೈ(reporterkarnataka.com): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಲ್ಲಿ ಭಾಗಿಯಾಗಿದ್ದ ದೋಷಿಗಳ ಬಿಡುಗಡೆ ಬೆನ್ನಲ್ಲೇ, ಭೀಕರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕುಖ್ಯಾತ ದಂತಚೋರ ವೀರಪ್ಪನ್‌ನ ಸೋದರನ ತಂಡದ ಇಬ್ಬರನ್ನೂ ತಮಿಳುನಾಡಿನಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
1987ರಲ್ಲಿ ಈರೋಡ್ ಜಿಲ್ಲೆಯ ಸತ್ಯಮಂಗಲ ಅರಣ್ಯ, ಪ್ರದೇಶದಲ್ಲಿ ಮೂವರು ಅರಣ್ಯಾಧಿಕಾರಿಗಳ ಹತ್ಯೆ ಪ್ರಕರಣದಲ್ಲಿ ವೀರಪ್ಪನ್‌ನ ಸೋದರ ಮಾಧಯ್ಯನ್, ಅಂಡಿಯಪ್ಪನ್ ಮತ್ತು ಪೆರುಮಾಳಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇವರೆಲ್ಲಾ 32 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದು ಅವರನ್ನು ಬಿಡುಗಡೆ ಮಾಡಬೇಕೆಂದು ಮಾನವ ಹಕ್ಕು ಹೋರಾಟಗಾರರು ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದರು.