ಇತ್ತೀಚಿನ ಸುದ್ದಿ
ದಾಂಡೇಲಿ ಸಮೀಪದ ಗ್ರಾಮದಲ್ಲಿ ಮೊಸಳೆ ಕ್ಯಾಟ್ ವಾಕ್ !: ಒಂದು ಕ್ಷಣ ಆತಂಕಗೊಂಡ ಸ್ಥಳೀಯರು!
01/07/2021, 23:23

ದಾಂಡೇಲಿ(reporterkarnataka news): ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಕೋಗಿಲಬನ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಮೊಸಳೆಯೊಂದು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಉಂಟು ಮಾಡಿತು.
ಕಾಳಿ ನದಿಯಿಂದ ಊರಿನತ್ತ ಬಂದ ಮೊಸಳೆ ಗ್ರಾಮದ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ಕಾಲ ಕ್ಯಾಟ್ ವಾಕ್ ನಡೆಸಿತು. ಯಾವುದೇ ಕ್ಯಾರ್ ಇಲ್ಲದೆ ಮೊಸಳೆ ವಾಕ್ ಮಾಡಿತು. ಮೊಸಳೆಯನ್ನು ಕಂಡು ಬೀದಿ ಶ್ವಾನಗಳು ಊಳಿಟ್ಟವು. ಕೆಲವು ಹೆದರಿ ಓಡಿ ಹೋದವು. ನಂತರ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯು ಮೊಸಳೆಯನ್ನು ಸೆರೆ ಹಿಡಿದು
ಮತ್ತೆ ನದಿಗೆ ಸೇರಿಸಿದರು. ಸಮೀಪದ ಕಾಳಿ ನದಿಯಲ್ಲಿ ಮೊಸಳೆ ಪಾರ್ಕ್ ಇದೆ. ಇಲ್ಲಿ ನೂರಾರು ಮೊಸಳೆಗಳಿವೆ. ಆದರೆ, ಜನವಸತಿ ಪ್ರದೇಶಕ್ಕೆ ಮೊಸಳೆ ನುಗ್ಗಿದ್ದು ಇದೇ ಮೊದಲು.