3:43 PM Friday29 - August 2025
ಬ್ರೇಕಿಂಗ್ ನ್ಯೂಸ್
Kodagu | ಗೋಣಿಕೊಪ್ಪದಲ್ಲಿ ಅಸ್ಸಾಂ ವ್ಯಕ್ತಿಯಿಂದ ಅಂಗಡಿ ಶಟರ್ ಮುರಿದು 32 ಹೊಸ… ಮಡಿಕೇರಿ – ವಿರಾಜಪೇಟೆ ಮುಖ್ಯರಸ್ತೆಯ ಮೇಕೇರಿ ಬಳಿ ಮಣ್ಣು ಕುಸಿತ: ವಾಹನ ಸಂಚಾರ… ಅ. 9ರಿಂದ 23ರವರೆಗೆ ಹಾಸನಾಂಬೆ ಉತ್ಸವ; ಈ ಬಾರಿ ದೇವಿ ದರ್ಶನ ನಿಯಮ… ಜಾತ್ಯತೀತತೆಯ ಸಂಕೇತವಾಗಿರುವ ನಾಡ ಹಬ್ಬ, ಧಾರ್ಮಿಕವಲ್ಲ: ಡಾ. ಪುರುಷೋತ್ತಮ ಬಿಳಿಮಲೆ Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ…

ಇತ್ತೀಚಿನ ಸುದ್ದಿ

ದಕ್ಷಿಣ ಕರ್ನಾಟದಲ್ಲಿ ಬಿಜೆಪಿ ಗಾಳಿ; ಇನ್ನೂ ಅನೇಕರಿಂದ ಪಕ್ಷ ಸೇರ್ಪಡೆ: ಮುಖ್ಯಮಂತ್ರಿ ಬೊಮ್ಮಾಯಿ

07/05/2022, 22:52

ಬೆಂಗಳೂರು(reporterkarnataka.com) ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ.

ಪ್ರತಿಪಕ್ಷಗಳಲ್ಲಿರುವ ಅನೇಕರು ಬಿಜೆಪಿ ಸೇರ್ಪಡೆಯಾಗಲು ಸಿದ್ದರಿದ್ದಾರೆ. 2023ಕ್ಕೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪ್ರಮುಖ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.

ಪ್ರತಿಪಕ್ಷಗಳಲ್ಲಿರುವ ಅನೇಕರು ಬಿಜೆಪಿ ಸೇರ್ಪಡೆಯಾಗಲು ಸಿದ್ದರಿದ್ದಾರೆ. 2023ಕ್ಕೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ಪಂಚ ರಾಜ್ಯಗಳ ಚುನಾವಣೆ ಬಳಿಕ, ನನ್ನ ಬಳಿ ಪ್ರತಿಪಕ್ಷದ ಶಾಸಕರು ಬಂದಿದ್ದರು. ಸಂಯಮ ಇರಲಿ, ಶಾಂತಿಯಾಗಿರಿ, ಬದಲಾವಣೆ ಬಂದಾಗ ಬರುವಂತೆ ಸೂಚಿಸಿದ್ದೇನೆ ಎಂದು ಸಿಎಂ ಹೇಳುವ ಮೂಲಕ ಪ್ರತಿಪಕ್ಷಗಳಿಗೆ ಶಾಕ್ ನೀಡಿದರು.

ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ಬಹಳ ಜನ ಬಹಳ ವರ್ಷ ದಕ್ಷಿಣ ಕರ್ನಾಟಕ ಅಂದರೆ ನಮ್ಮ ಕೈಯಲ್ಲಿ, ಕಪಿ ಮುಷ್ಠಿಯಲ್ಲಿರೋ ಪ್ರದೇಶ ಅನ್ನುತ್ತಿದ್ದರು. ದಕ್ಷಿಣ ಕರ್ನಾಟಕದ ಜನ ರಾಜಕೀಯದಲ್ಲಿ ಪ್ರಬುದ್ದರು. ಮೈಸೂರು ಮಹಾರಾಜರು ಆಳಿದ ಪ್ರದೇಶ. ಆ ಕಾಲದಲ್ಲೇ ಏಷ್ಯಾದ ವಿದ್ಯುತ್ ಕಾರ್ಖಾನೆ, ಚಿನ್ನದ ಗಣಿ, ಎಲ್ಲವನ್ನೂ ಹೊಂದಿದ್ದ ಪ್ರದೇಶ. ಎರಡು ಪಕ್ಷಗಳ ಬೆಂಬಲ ಮಾಡುತ್ತಾ ಮಾಡುತ್ತಾ ಬದಲಾವಣೆ ಮಾಡಲು ಎಲ್ಲರೂ ಅವಕಾಶ ಕೋರುತ್ತಿದ್ದಾರೆ ಎಂದರು.

ಪ್ರಧಾನಿ ಮೋದಿಯವರ ಮೇಲೆ ವಿಶ್ವಾಸಾರ್ಹತೆ ಇದೆ. ತುಷ್ಠೀಕರಣ ರಾಜಕಾರಣ ಸರಿಯಲ್ಲ. ಎಲ್ಲರಿಗೂ ಸಮನಾದ ಅವಕಾಶ ನೀಡುವ ರಾಜಕಾರಣ ಬೇಕಿದೆ. ಇದು ನಮ್ಮ ನಾಯಕರ ಸಂಕಲ್ಪ ಎಂದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ವಿಶ್ವಾಸ್, ಸಬ್ ಕಾ ಪ್ರಯಾಸ್. ದೇಶಕ್ಕಾಗಿ 24 ಗಂಟೆಗಳ ಕಾಲ ಕೆಲಸ ಮಾಡುತ್ತಿರುವ ವ್ಯಕ್ತಿ ನರೇಂದ್ರ ಮೋದಿ. ಕೊರೋನಾ ಬಂದಾಗ ಇಡೀ ದೇಶಕ್ಕೆ ಲಸಿಕೆ ಕೊಡಿಸುವ ಕೆಲಸ ಮಾಡಿದರು. ಅಷ್ಟೇ ಅಲ್ಲ, ಬಡ ರಾಷ್ಟ್ರಗಳಿಗೂ ಉಚಿತವಾಗಿ ನೀಡುವ ಕೆಲಸ ಮಾಡಲಾಯಿತು. ಎಲ್ಲಾ ವರ್ಗದ ಜನರಿಗೆ ಅವಕಾಶ ನೀಡಿದ್ದಾರೆ. ರಾಜ್ಯದ ಬಜೆಟ್ ಆದ ಬಳಿಕ ಜನ ಮತ್ತಷ್ಟು ವಿಶ್ವಾಸ ಇಟ್ಟಿದ್ದಾರೆ. ಎಲ್ಲರಿಗೂ ಆಶ್ಚರ್ಯಪಡುವ ಬಜೆಟ್ ನೀಡಿದ್ದು, ಎಲ್ಲರಿಗೂ ತಲುಪುವ ಕೆಲಸ ಮಾಡಿದ್ದೇವೆ. ಬಜೆಟ್ ಕೊಡೋದು ಅಷ್ಟೇ ಅಲ್ಲದೆ, ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಕೂಡ ಮಾಡುತ್ತಿದ್ದೇವೆ. ನಮ್ಮ ಸಾಧನೆ ಜನರ ಮುಂದಿಟ್ಟು, ಮತ ಕೇಳುತ್ತೇವೆ. ಮತ್ತೆ ರಾಜ್ಯದಲ್ಲಿ 150+ ಸೀಟುಗಳು ಗೆಲ್ಲುವ ಮೂಲಕ, ವಿಧಾನಸೌಧದಲ್ಲಿ ಆಡಳಿತ ನೀಡುತ್ತೇವೆ. 

ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು