ಇತ್ತೀಚಿನ ಸುದ್ದಿ
ದಕ್ಷಿಣಕನ್ನಡ ಜಿಲ್ಲಾದ್ಯಂತ ಪಿಎಫ್ ಐ ನಾಯಕರ ಮನೆಗಳಿಗೆ ಎನ್ ಐಎ ದಾಳಿ: ಭಾರಿ ಪ್ರತಿಭಟನೆ
22/09/2022, 10:51

ಮಂಗಳೂರು(reporterkarnataka.com): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ದ.ಕ. ಜಿಲ್ಲಾ ಕಚೇರಿ ಸೇರಿದಂತೆ ಪಿಎಫ್ಐ ನಾಯಕರ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಎನ್ಐಎ ಅಧಿಕಾರಿಗಳು
ದಾಳಿ ನಡೆಸಿದ್ದಾರೆ.
ರಾಜ್ಯ ಪಿಎಫ್ ಐ ನಾಯಕರ ಮನೆ ಮೇಲೆ ಕೆಲವು ದಿನಗಳಿಂದ ದಾಳಿ ನಡೆಸುತ್ತಿರುವ ಎನ್ಐಎ ಗುರುವಾರ ಬೆಳಗ್ಗೆ ಮಂಗಳೂರು ಹೊರವಲಯದ ಕಾವೂರು, ಬಜ್ಪೆ, ಜೋಕಟ್ಟೆ, ಸ್ಟೇಟ್ ಬ್ಯಾಂಕ್, ಕುಳಾಯಿ ಸೇರಿದಂತೆ ಕೆಲವೆಡೆ ರಾಜ್ಯ ಪಿಎಫ್ಐ ನಾಯಕರ ಮನೆ ಮೇಲೆ ದಾಳಿ ನಡೆಸಿದೆ.
ನಾಯಕರ ಮನೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಮನೆ ಮುಂಭಾಗ ಪಿಎಫ್ಐ ಕಾರ್ಯಕರ್ತರು ಜಮಾಯಿಸಿದ್ದು, ಗೋ ಬ್ಯಾಕ್ ಎನ್ಐಎ ಘೋಷಣೆ ಕೂಗಿ, ಇದು ಸರಕಾರಿ ದಾಳಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಉಪ್ಪಿನಂಗಡಿ, ಬೋಳಂತೂರುನಲ್ಲಿಯೂ ದಾಳಿ ನಡೆದ ಬಗ್ಗೆ ವರದಿಯಾಗಿದ್ದು, ಪಿಎಫ್ಐ ನಾಯಕರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಏಕಕಾಲಕ್ಕೆ ವಿವಿಧ ವಾಹನಗಳಲ್ಲಿ ಆಗಮಿಸಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದು, ವಿಷಯ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಜಮಾಯಿಸಿ ಎನ್ ಐಎ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗುತ್ತಿದ್ದಾರೆ.