ಇತ್ತೀಚಿನ ಸುದ್ದಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನಧಿಕೃತ ಧಾರ್ಮಿಕ ಕೇಂದ್ರಗಳ ಪಟ್ಟಿ ಸಿದ್ಧ: ತೆರವು ಲಿಸ್ಟ್ ನಲ್ಲಿ ಯಾವುದೆಲ್ಲ ಎಷ್ಟೆಷ್ಟಿವೆ?
14/09/2021, 19:21
ಮಂಗಳೂರು(reporterkarnataka.com) : ರಾಜ್ಯದಲ್ಲಿ ಇದೀಗ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿನ ವಿವಾದ ತಲೆದೋರಿದೆ. ಮೈಸೂರಿನಲ್ಲಿ ದೇಗುಲವೊಂದನ್ನು ನೆಲಸಮ ಮಾಡಿರುವುದು ಭಾರಿ ಸುದ್ದಿಗೆ ಕಾರಣವಾಗಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ತೆರವುಗೊಳ್ಳಲಿರುವ ಅನಧಿಕೃತ ಧಾರ್ಮಿಕ
ಕಟ್ಟಡದ ಪಟ್ಟಿ ಸಿದ್ಧವಾಗಿದೆ. ಇದರಲ್ಲಿ ದೇವಸ್ಥಾನ/ದೈವಸ್ಥಾನ, ಚರ್ಚ್ ಹಾಗೂ ಮಸೀದಿ ಸೇರಿದೆ.
ಜಿಲ್ಲೆಯಲ್ಲಿ ಒಟ್ಟು 902 ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿನ ಬಗ್ಗೆ ಮಾಹಿತಿ ಲಭಿಸಿದೆ. ಇದರಲ್ಲಿ ದೈವ-ದೇವಸ್ಥಾನಗಳು-667, ಮಸೀದಿಗಳು-186, ಚರ್ಚ್ 56 ಹಾಗೂ ಇತರ ಧಾರ್ಮಿಕ ಕಟ್ಟಡಗಳು 11 ಇವೆ ಎನ್ನಲಾಗಿದೆ.
ತೆರವುಗೊಳ್ಳಲಿರುವ ದೇಗುಲಗಳಲ್ಲಿ ಶಕ್ತಿನಗರದ ಶ್ರೀ ವೈದ್ಯನಾಥ ದೈವಸ್ಥಾನವೂ ಸೇರಿದೆ ಎನ್ನಲಾಗಿದೆ.ಆದರೆ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.
ಮಂಗಳೂರಿನ ಶಕ್ತಿನಗರದ ಶ್ರೀ ವೈದ್ಯನಾಥ ದೈವಸ್ಥಾನವೂ ಈ ಲಿಸ್ಟ್‌ನಲ್ಲಿದೆ ಎಂದು ತಿಳಿದು ಬಂದಿದೆ.