7:39 PM Thursday26 - December 2024
ಬ್ರೇಕಿಂಗ್ ನ್ಯೂಸ್
ಕೂಡ್ಲಿಗಿ ತಲುಪಿದ ಸನ್ನತಿ ಪಂಚಶೀಲ ಬೌದ್ಧ ಪಾದಯಾತ್ರಿಕರು: ಸನ್ನತಿಯಿಂದ ಬೆಂಗಳೂರಿಗೆ 27ನೇ ಬ್ರಹ್ಮೋತ್ಸವ: ನಂಜನಗೂಡು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ವತಿಯಿಂದ ಬೃಹತ್ ಪಾದಯಾತ್ರೆ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇಗುಲದಲ್ಲಿ ಈ ಬಾರಿ ಬಿಕಾಂ ಜಾತ್ರೆ!: ಹಾಗಂದ್ರೆ ಏನು… ಸಿ.ಟಿ.ರವಿ ಅವರದ್ದು ಕೊಳಕು ಮನಸ್ಸಿನ ವ್ಯಕ್ತಿತ್ವ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿ.ಟಿ‌. ರವಿ ಪತ್ರ ಬರೆದಿದ್ದಾರೆ, ಹೆಬ್ಬಾಳ್ಕರ್ ಅವರಿಂದ ಯಾವುದೇ ಪತ್ರ ಬಂದಿಲ್ಲ: ಸಭಾಪತಿ… ಶಸ್ತ್ರ ಚಿಕಿತ್ಸೆಗೊಳಗಾಗಿರುವ ಕನ್ನಡದ ಪ್ರಸಿದ್ಧ ನಟ ಡಾ. ಶಿವರಾಜ್‌ ಕುಮಾರ್ ಚೇತರಿಕೆ; ಆರೋಗ್ಯ… ಸಿ.ಟಿ. ರವಿಗೆ ರಕ್ಷಣೆ ನೀಡಲು ರಾಜ್ಯಪಾಲರಿಗೆ ಮನವಿ; ನ್ಯಾಯಾಂಗ ತನಿಖೆಗೆ ಪ್ರತಿಪಕ್ಷ ನಾಯಕ… ಈ ರಾಜ್ಯದಲ್ಲಿ ಗೃಹ ಸಚಿವರು ಎನ್ನುವವರು ಇದ್ದಾರಾ?: ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನೆ ಸಿ.ಟಿ.ರವಿ ವಿರುದ್ಧ ಕಾನೂನು ಸಮರ; ಪ್ರಧಾನಿ, ರಾಷ್ಟ್ರಪತಿಗೂ ದೂರು ನೀಡುವೆ: ಸಚಿವೆ ಲಕ್ಷ್ಮೀ… ಮಂಗಳೂರು- ಉಡುಪಿ ಜಿಲ್ಲೆಗಳಲ್ಲಿ ಜನವರಿ 17-23 ಕರ್ನಾಟಕ ಕ್ರೀಡಾಕೂಟ-2025: ವ್ಯವಸ್ಥಿತವಾಗಿ ನಡೆಸಲು ಸಿಎಂ…

ಇತ್ತೀಚಿನ ಸುದ್ದಿ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಚುನಾವಣೆ: ಛಾಯಾಗ್ರಾಹಕ ಸತೀಶ್ ಇರಾಗೆ ಅತೀ ಹೆಚ್ಚು ಮತ

01/03/2022, 00:08

ಮಂಗಳೂರು(reporterkarnataka.com):

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಉದಯವಾಣಿ ಪತ್ರಿಕೆಯ ಛಾಯಾಗ್ರಾಹಕ ಸತೀಶ್ ಇರಾ ಅತಿ ಹೆಚ್ಚು ಮತ ಪಡೆಯುವ ಮೂಲಕ ಮುಂಚೂಣಿಯಲ್ಲಿ ನಿಂತಿದ್ದಾರೆ.

ಮಂಗಳೂರು ಮಾಧ್ಯಮ ವಲಯದಲ್ಲಿಯೇ ಅವರು ಅಜಾತಶತ್ರು ಎಂದು ಗುರುತಿಸಲ್ಪಟ್ಟಿದ್ದಾರೆ.

ಕಾರ್ಯಕಾರಿ ಸಮಿತಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಅವರು 223 ಮತಗಳನ್ನು ಪಡೆದಿದ್ದಾರೆ ಅದೇ ರೀತಿ ಪಬ್ಲಿಕ್ ಟಿವಿ ವರದಿಗಾರ ಸುಖ್‌ಪಾಲ್ ಪೊಳಲಿ 213 ಮತಗಳನ್ನು ಪಡೆದುಕೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನದಲ್ಲಿ ಹಿರಿಯ ಪತ್ರಕರ್ತರಾದ ಭಾಸ್ಕರ ರೈ ಕಟ್ಟ 194 ಮತಗಳನ್ನು ಪಡೆದು ಆಯ್ಕೆಯಾದರೆ, ಕಾರ್ಯದರ್ಶಿ ಸ್ಥಾನಕ್ಕೆ ವಿಜಯ ಕರ್ನಾಟಕದ ಹಿರಿಯ ವರದಿಗಾರರಾದ ವಿಜಯ್ ಕೋಟ್ಯಾನ್ 186 ಮತಗಳನ್ನು ಪಡೆದಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿತೇಂದ್ರ ಕುಂದೇಶ್ವರ 164 ಮತಗಳನ್ನು ಪಡೆದುಕೊಂಡು ಆಯ್ಕೆಯಾಗಿದ್ದಾರೆ.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ವಿಜೇತರ ಪಟ್ಟಿ ಹೀಗಿದೆ

ಉಪಾಧ್ಯಕ್ಷ (3 ಸ್ಥಾನ)

1.ಭಾಸ್ಕರ ರೈ ಕಟ್ಟ- 194

2.ರಾಜೇಶ್ ಕೆ.ಪೂಜಾರಿ-129

3.ಅನ್ಸಾರ್ ಇನೋಳಿ-122

ಪ್ರಧಾನ ಕಾರ್ಯದರ್ಶಿ (ಒಂದು ಸ್ಥಾನ)

1.ಜಿತೇಂದ್ರ ಕುಂದೇಶ್ವರ-164

ಕಾರ್ಯದರ್ಶಿ (3 ಸ್ಥಾನ)

1.ವಿಜಯ್ ಕೋಟ್ಯಾನ್ 186.

2.ಗಂಗಾಧರ ಕಲ್ಲಪಳ್ಳಿ-172

3.ಭುವನೇಶ್ ಗೇರುಕಟ್ಟೆ-146

 ಕಾರ್ಯಕಾರಿ ಸಮಿತಿ(15 ಸ್ಥಾನ)

 

1) ಸತೀಶ್ ಇರಾ-223

2) ಸುಖ್ ಪಾಲ್ ಪೊಳಲಿ – 213

3) ವಿಲ್ಫ್ರೆಡ್ ಡಿಸೋಜ- 201

4) ರಾಜೇಶ್ ಶೆಟ್ಟಿ- 191

5) ಸತ್ಯವತಿ- 192

6) ಭರತ್ ರಾಜ್ -181

7) ಮೋಹನ್ ಕುತ್ತಾರ್- 173

8) ಹರೀಶ್ ಕುಲ್ಕುಂದ-169

9) ಮಹಮ್ಮದ್ ಆರೀಫ್ -168

10- ರಾಜೇಶ್ ದಡ್ಡಂಗಡಿ- 147

11) ಶ್ರವಣ್ ನಾಳ- 138

12) ನಿಶಾಂತ್ ಕಿಲೆಂಜೂರು- 136

13) ಸಂದೇಶ್ ಜಾರ- 134

14) ಹಿಲರಿ ‌ಕ್ರಾಸ್ತಾ- 123

15) ಅಶೋಕ್ ಶೆಟ್ಟಿ – 111

ಅಧ್ಯಕ್ಷ: ಶ್ರೀನಿವಾಸ ನಾಯಕ್ ಇಂದಾಜೆ (ಅವಿರೋಧ)

ಕೋಶಾಧಿಕಾರಿ: ಬಿ.ಎನ್.ಪುಷ್ಪರಾಜ್ (ಅವಿರೋಧ)

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ: ಜಗನ್ನಾಥ ಶೆಟ್ಟಿ ಬಾಳ (ಅವಿರೋಧ)

ಇತ್ತೀಚಿನ ಸುದ್ದಿ

ಜಾಹೀರಾತು