ಇತ್ತೀಚಿನ ಸುದ್ದಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಇಲ್ಲ; ಬೆಳಗ್ಗೆ 6ರಿಂದ 10ರ ವರೆಗೆ ಎಂದಿನಂತೆ ಖರೀದಿಗೆ ಅವಕಾಶ
12/06/2021, 06:48
ಮಂಗಳೂರು(reporterkarnataka news):ಕೊರೊನಾ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂ.12 ಹಾಗೂ 13ರಂದು ಯಾವುದೇ ವೀಕೆಂಡ್ (ವಾರಾಂತ್ಯ) ಕರ್ಫ್ಯೂ ಇರೋದಿಲ್ಲ.
ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ವಾರಾಂತ್ಯದ ಕರ್ಫ್ಯೂ ಕುರಿತು ಯಾವುದೇ ಪ್ರತ್ಯೇಕ ನಿರ್ದೇಶನ ನೀಡಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ ಬೆಳಗ್ಗೆ 10ರವರೆಗೆ ಅನುಮತಿ ಇದೆ . ಈ ಹಿಂದೆ ಇರುವ ಮಾರ್ಗಸೂಚಿಗಳು ಜೂ.21 ರವರೆಗೆ ಜಾರಿಯಲ್ಲಿರುತ್ತವೆ. ಇದರ ಜತೆಗೆ ಕನ್ನಡಕ ಅಂಗಡಿ, ಗ್ಯಾರೇಜ್, ವಾಹನ ಸೇವಾ ಕೇಂದ್ರಗಳಿಗೆ ಮಾತ್ರ ಬೆಳಗ್ಗೆ 6ರಿಂದ 12 ರವರೆಗೆ ಅನುಮತಿ ನೀಡಲಾಗಿದೆ. ಉಳಿದಂತೆ ಯಾವುದೇ ವ್ಯಾಪಾರಕ್ಕೂ ಅವಕಾಶ ನೀಡಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.