ಇತ್ತೀಚಿನ ಸುದ್ದಿ
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ
09/10/2025, 20:42

ಮಂಗಳೂರು(reporterkarnataka.com): ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ ಪ್ರಕರಣ ಸಂಬಂಧಿಸಿದಂತೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ
ಈಗಾಗಲೇ ಮೂರು ಬಾರಿ ಬೆಳ್ತಂಗಡಿ ಪೊಲೀಸರು
ನೋಟಿಸ್ ನೀಡಿದ್ದಾರೆ. ಆದರೆ ಪೊಲೀಸರು ನೀಡಿದ ಮೂರು ನೋಟಿಸ್ ಗೂ ಪ್ರತಿಕ್ರಿಯಿಸದೆ ತಿಮರೋಡಿ ಅಜ್ಞಾತರಾಗಿದ್ದಾರೆ. ಬಂಧನ ಭೀತಿಯಿಂದ ಕಳೆದ 20 ದಿನಗಳಿಂದ ತಿಮರೋಡಿ ಅಜ್ಞಾತರಾಗಿದ್ದಾರೆ.