ಇತ್ತೀಚಿನ ಸುದ್ದಿ
ಕೊರೊನಾ ವಿರುದ್ಧ ಹೋರಾಡಲು ದುಬೈ ಬೆಂಬಲ: ಬುರ್ಜ್ ಖಲೀಫಾದ ಮೇಲೆ ತ್ರಿವರ್ಣ ಧ್ವಜ
26/04/2021, 10:53
ಬುರ್ಜ್ ಖಲೀಫಾದ ಮೇಲೆ ತ್ರಿವರ್ಣ ಧ್ವಜ
ನವದೆಹಲಿ (reporterkarnataka news): ಕೊರೊನಾ ಎರಡನೇ ಅಲೆಯ ಸೋಂಕಿನಿಂದ ಬಿಕ್ಕಟ್ಟು ಎದುರಿಸುತ್ತಿರುವ ಭಾರತದ ಪರವಾಗಿ ದುಬೈ ರಾಷ್ಟ್ರವು ಜುರ್ಜ್ ಖಲೀಫಾದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ನಾವು ನಿಮ್ಮೊಂದಿಗಿದ್ದೇವೆ ಎಂಬ ಸಂದೇಶವನ್ನು ರವಾನಿಸಿದೆ.
ವಿಶ್ವದ ಹಲವು ರಾಷ್ಟ್ರಗಳು ಭಾರತಕ್ಕೆ ಈಗಾಗಲೇ ನೆರವು ಘೋಷಿಸಿದ್ದು, ದುಬೈ ನಿಮ್ಮೊಂದಿಗೆ ನಿಲ್ಲುತ್ತೇವೆ ಎಂದು ಧೈರ್ಯ ತುಂಬಿದೆ. ಸಂಕಷ್ಟ ಮತ್ತು ಸವಾಲಿನ ಸಂದರ್ಭದರಲ್ಲಿ ನಾವು ಭಾರತದ ಜತೆ ಇದ್ದೇವೆ ಎಂದು ಬುರ್ಜ್ ಖಲೀಫಾದ ಟ್ವೀಟರ್ ಮೂಲಕ ಟ್ವೀಟ್ ಮಾಡಲಾಗಿದೆ. ದುಬೈನ ಇತರ ಪ್ರಮುಖ ಸ್ಥಳದಲ್ಲಿಯೂ ತ್ರಿವರ್ಣ ಧ್ವಜ ಹಾರಿಸಲಾಗಿದೆ.