ಇತ್ತೀಚಿನ ಸುದ್ದಿ
ಕೊರೊನಾ ಸೋಂಕು: ಪತ್ರಕರ್ತ, ಕಿನ್ನಿಗೋಳಿಯ ಯಶವಂತ ಐಕಳ ಇನ್ನಿಲ್ಲ
02/06/2021, 15:33
ಮಂಗಳೂರು(reporterkarnataka news):
ಹಿರಿಯ ಪತ್ರಕರ್ತ ಕಿನ್ನಿಗೋಳಿಯ ಯಶವಂತ ಐಕಳ ಕೋವಿಡ್ ಸೋಂಕಿನಿಂದ ಬುಧವಾರ ನಿಧನರಾದರು.
ವಾರದ ಹಿಂದೆ ಕೊರೊನಾ ಸೋಂಕಿಗೆ ಒಳಗಾದ ಅವರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾದಿಂದ ಗುಣಮುಖರಾದ ಅವರು ಇಂದು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗುವವರಿದ್ದರು. ಅಷ್ಟರಲ್ಲಿ ಯಶವಂತ ಐಕಳ ಮೃತಪಟ್ಟಿದ್ದಾರೆ. ಐಕಳ ಅವರು ಪ್ರಸಿದ್ಧ ದಿನ ಪತ್ರಿಕೆಗಳಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಸ್ವಂತ ನ್ಯೂಸ್ ವೆಬ್ ಸೈಟ್ ಮಾಡಿದ್ದರು.