ಇತ್ತೀಚಿನ ಸುದ್ದಿ
ಕೊರೊನಾ ಭೀತಿ: ವ್ಯಾಕ್ಸಿನ್ ಪಡೆಯಲು ಸಾರ್ವಜನಿಕರಿಂದ ನೂಕುನುಗ್ಗಲು; ಹಲವರಿಗೆ ನಿರಾಸೆ
31/05/2021, 15:06
ಡಿ.ಆರ್. ಜಗದೀಶ್ ದೇವಲಾಪುರ ನಾಗಮಂಗಲ
info.reporterkarnataka@gmail.com
ನಾಗಮಂಗಲ ಪಟ್ಟಣದ ಜೂನಿಯರ್ ಕಾಲೇಜಿನ ಅವರಣದಲ್ಲಿ ಪುರಸಭೆಯ ವತಿಯಿಂದ ಪಟ್ಟಣದ ಅನುಮೋದಿತ ಬೀದಿ ಬದಿ ವ್ಯಾಪಾರಿಗಳಿಗೆ ಕೋವಿಡ್ 19 ಲಸಿಕೆ ಪಡೆಯುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಾಕ್ಸಿನ್ ಪಡೆಯಲು ನೂಕುನುಗ್ಗಲು ಉಂಟಾಯಿತು.
ಕಳೆದ ಎರಡು ದಿನಗಳಿಂದ ನಾಲ್ಕು ನೂರಕ್ಕೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆಯನ್ನು ಹಾಕಲಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಹ ಪಾಲ್ಗೊಂಡು ವ್ಯಾಕ್ಸಿನ್ ಪಡೆಯುತ್ತಿದ್ದರು. ಆದರೆ ವ್ಯಾಕ್ಸಿನ್ ಕೊರತೆಯಿಂದ ಇಂದು ವ್ಯಾಕ್ಸಿನ್ ಪಡೆಯಲು ಬಂದಿದ್ದ ಸಾರ್ವಜನಿಕರಿಗೆ ನಿರಾಸೆಯಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಟಿ ಹೆಚ್ ಪ್ರಸನ್ನರವರು ಸಾವ೯ಜನಿಕರನ್ನು ಕುರಿತು ಮಾತನಾಡುತ್ತಾ ಈಗ ವ್ಯಾಕ್ಸಿನ್ ಗಳ ಕೊರತೆ ಇದ್ದು ಮುಂದಿನ ದಿನಗಳಲ್ಲಿ ಹೆಚ್ಚು ವ್ಯಾಕ್ಸಿನ್ ಪೂರೈಕೆಯಾಗಲಿದ್ದು ಆಗ ಸಾರ್ವಜನಿಕರು ಒಂದು ವ್ಯಾಕ್ಸಿನ ಪಡೆಯಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಚನ್ನಪ್ಪ ಹಾಗೂ ಆರೋಗ್ಯ ನೀರಿಕ್ಷಕರಾದ ಮಾರ್ತಿ, ಸಿಬ್ಬಂದಿಗಳಾದ ನಾಗರಾಜು ಮೋಹನ್ ಆರೋಗ್ಯ ಸಹಾಯಕಿ ಪ್ರಮೀಳಾ ಹಾಗೂ ಮತ್ತಿತರರು ಹಾಜರಿದ್ದರು.