5:59 AM Tuesday7 - January 2025
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ ಎಲ್ಲ ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ಇಂಧನ ಸಚಿವ… ಊಟದಲ್ಲಿ ರಾಜಕೀಯ ಬೆರೆಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಮೂಡಿಗೆರೆ: ಹುಲಿ ದಾಳಿಗೆ ಬಾಣಂತಿ ಹಸು ಬಲಿ; ಕರುವಿನ ಆಕ್ರಂಧನ ಬೆಂಗಳೂರು: 22ನೇ ಚಿತ್ರಸಂತೆ ಉದ್ಘಾಟನೆ; ಕಲಾಕೃತಿ ಕೊಂಡು ಕಲಾವಿದರ ಬೆಂಬಲಿಸಲು ಮುಖ್ಯಮಂತ್ರಿ ಕರೆ ವಿರೋಧ ಪಕ್ಷ ಆರೋಪ ಮಾಡಿದರೆ ಸಾಬೀತು ಮಾಡಬೇಕು: ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಇಡಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಲೂಟಿ: ಕಠಿಣ… ಬೆಂಗಳೂರು: ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಗುರುತಿಸಲು ಸೂಚನೆ ಎನ್. ಆರ್. ಪುರ: ರಾಜ್ಯ ಹೆದ್ದಾರಿಯಲ್ಲಿ ಓಡಾಡಿದ ಕಾಡಾನೆ; ನಾಗರಿಕರಲ್ಲಿ ಹೆಚ್ಚಿದ ಆತಂಕ ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನ ವಿನಿಯೋಗ: ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ…

ಇತ್ತೀಚಿನ ಸುದ್ದಿ

ಕಾಂಗ್ರೆಸ್ ಹಿರಿಯ ಮುಖಂಡ ಯೂಸುಫ್ ಖಾದರ್ ಇನ್ನಿಲ್ಲ: ಸ್ಪೀಕರ್ ಖಾದರ್ ಸಹಿತ ಗಣ್ಯರ ಸಂತಾಪ

12/05/2024, 11:39

ಮಂಗಳೂರು(reporterkarnataka.com): ದ.ಕ.ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡ ಯೂಸುಫ್ ಖಾದರ್(85) ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಶನಿವಾರ ಕುದ್ರೋಳಿಯ ಸ್ವಗೃಹದಲ್ಲಿ ನಿಧನರಾದರು
ಯೂಸುಫ್ ಖಾದರ್ ಅವರು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕುದ್ರೋಳಿ ವಾರ್ಡ್ ನಲ್ಲಿ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿ ಸಕ್ರೀಯ ಕಾಂಗ್ರೆಸ್ ಕಾರ್ಯಕರ್ತನಾಗಿ ಕರ್ತವ್ಯನಿರ್ವಹಿಸಿದ್ದಾರೆ. ಸಾಮಾಜಿಕ-ಧಾರ್ಮಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಅವರು ಝೀನತ್ ಬಕ್ಷ್ ಮಸೀದಿಯ ಚುನಾಯಿತ ಕಮಿಟಿ ಸದಸ್ಯರಾಗಿ, ಕುದ್ರೋಳಿಯ ಜಾಮಿಅ ಮಸ್ಜಿದ್ ಆಡಳಿತ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ.
ಮೃತರು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
*ಸಂತಾಪ:* ಯೂಸುಫ್ ಖಾದರ್ ಕುದ್ರೋಳಿ ಅವರು ಜಿಲ್ಲಾ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿ ಹಲವು ದಶಕಗಳ ಕಾಲ ದುಡಿದಿರುತ್ತಾರೆ. ಕುದ್ರೋಳಿಯ ಪಕ್ಷ ಸಂಘಟನೆಗೆ ಅವರ ಕೊಡುಗೆ ಅಪಾರ. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ, ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಗಂಗಾಧರ್ ಗೌಡ, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ, ಎನ್.ಎಂ.ಅಡ್ಯಂತಾಯ, ಮೊಹಮ್ಮದ್ ಮಸೂದ್, ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೊ, ಐವನ್ ಡಿಸೋಜಾ, ಎಐಸಿಸಿ ಕಾರ್ಯದರ್ಶಿ ವಿ.ಪಿ.ಮೋಹನ್, ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ, ಕೆಪಿಸಿಸಿ ಪದಾಧಿಕಾರಿಗಳಾದ ಮಿಥುನ್ ರೈ, ರಕ್ಷಿತ್ ಶಿವರಾಂ, ಜಿ.ಕೃಷ್ಣಪ್ಪ, ಇನಾಯತ್ ಅಲಿ, ಎಂ.ಎಸ್.ಮೊಹಮ್ಮದ್, ಜಿ.ಎ.ಬಾವಾ, ಟಿ.ಎಂ.ಶಹೀದ್, ಲಾವಣ್ಯ ಬಳ್ಳಾಲ್, ಮುಖಂಡರಾದ ಬಿ.ಎಚ್.ಖಾದರ್, ಯು.ಕೆ.ಮೋನು, ರಾಕೇಶ್ ಮಲ್ಲಿ, ಡಾ.ರಘು ಸಳ್ಯ, ಸುರೇಶ್ ಬಳ್ಳಾಲ್, ಇಬ್ರಾಹೀಂ ಕೋಡಿಜಾಲ್, ಅಶ್ವಿನ್ ಕುಮಾರ್ ರೈ, ಶಶಿಧರ್ ಹೆಗ್ಡೆ, ಕೆ.ಅಶ್ರಫ್, ಸದಾಶಿವ್ ಉಳ್ಳಾಲ್, ಮಮತಾ ಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲೀಂ, ಜಿಲ್ಲಾ ಕಾಂಗ್ರೆಸ್ ಮುಂಚೂಣಿ ಘಟಕಾಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೋ, ಜೋಕಿಂ ಡಿಸೋಜ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಶೇಖರ್ ಕುಕ್ಕೇಡಿ, ಮನೋಹರ್ ಶೆಟ್ಟಿ, ನಾರಾಯಣ್ ನಾಯ್ಕ್, ಮೋಹನ್ ಗೌಡ, ಮನೋರಾಜ್ ರಾಜೀವ, ಲಾರೆನ್ಸ್ ಡಿಸೋಜ, ಅಲಿಸ್ಟರ್, ಡಾ.ಶೇಖರ್ ಪೂಜಾರಿ, ಶುಭಾಷ್ ಚಂದ್ರ ಶೆಟ್ಟಿ ಕೊಳ್ನಾಡು, ಉಲ್ಲಾಸ್ ಕೋಟ್ಯಾನ್, ಚೇತನ್ ಬೆಂಗ್ರೆ, ಬಿ.ಎಂ.ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಕೌಶಲ್ ಪ್ರಸಾದ್ ಶೆಟ್ಟಿ, ಸುಹಾನ್ ಆಳ್ವ, ಪೂರ್ಣೇಶ್ ಭಂಡಾರಿ, ಮ.ನ.ಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಲ್ಯಾನ್ಸ್ ಲೋಟೊ ಪಿಂಟೊ, ಭಾಸ್ಕರ್ ಕೆ., ಅಬ್ದುಲ್ ರವೂಫ್, ಕೇಶವ ಮರೋಳಿ, ಜೆಸಿಂತಾ, ಎ.ಸಿ.ವಿನಯರಾಜ್, ಸಂಶುದ್ದೀನ್ ಕುದ್ರೋಳಿ, ಲತೀಫ್ ಕಂದಕ್, ನವೀನ್ ಡಿಸೋಜ, ಅಶ್ರಫ್ ಬಜಾಲ್, ಅನೀಲ್ ಕುಮಾರ್, ಝೀನತ್ ಸಂಶುದ್ದೀನ್ ಬಂದರ್, ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್, ವಹಾಬ್ ಕುದ್ರೋಳಿ, ಮಕ್ಬೂಲ್ ಹಾಗೂ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು