ಇತ್ತೀಚಿನ ಸುದ್ದಿ
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನ ರತ್ನಾಕರ್ ಶೆಟ್ಟಿ ಆಯ್ಕೆ
28/12/2025, 11:07
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಭಾರಿ ಕುತೂಹಲ ಮೂಡಿಸಿದ್ದ ತೀರ್ಥಹಳ್ಳಿಯ ಪಟ್ಟಣ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಎರಡು ಪಕ್ಷಗಳಿಂದ ನಾಮಪತ್ರಗಳನ್ನು ಸಲ್ಲಿಸಲಾಗಿತ್ತು. ಬಿಜೆಪಿ ಪಕ್ಷದಿಂದ ಸೊಪ್ಪುಗುಡ್ಡೆ ರಾಘವೇಂದ್ರ ನಾಮಪತ್ರ ಸಲ್ಲಿಸಿದರೆ ಕಾಂಗ್ರೆಸ್ ಪಕ್ಷದಿಂದ ರತ್ನಾಕರ್ ಶೆಟ್ಟಿ ನಾಮಪತ್ರವನ್ನು ಸಲ್ಲಿಸಿದ್ದರು.
ಕಾಂಗ್ರೆಸ್ ಪಕ್ಷದ ಅಭಿಪ್ರಾಯದಿಂದ ಬೇಸರಗೊಂಡ ಜಯಪ್ರಕಾಶ್ ಶೆಟ್ಟಿ ಪಟ್ಟಣ ಪಂಚಾಯಿತಿಗೆ ಬಂದು ವಾಪಾಸ್ ಹೊರ ನಡೆದರು. ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಿದ ರತ್ನಾಕರ ಶೆಟ್ಟಿ ಚುನಾವಣೆಯ ಆಧಾರದ ಮೇಲೆ ಅಧ್ಯಕ್ಷ ಸ್ಥಾನವನ್ನ ಪಡೆದರು. ಇಬ್ಬರ ಜಗಳದಿಂದ ಮೂರನೆಯವರಿಗೆ ಲಾಭ ಎಂಬಂತೆ ಕಾಂಗ್ರೆಸ್ ಪಕ್ಷದಲ್ಲಿ ನಡೆದಂತಹ ವೈಮನಸ್ಸಿನಿಂದ ಓರ್ವರಿಗೆ ಜಯ ಸಿಕ್ಕಂತೆ ಆಗಿದೆ.
ಸೊಪ್ಪುಗುಡ್ಡೆ ರಾಘವೇಂದ್ರ ನಾಮಪತ್ರ ಸಲ್ಲಿಸಿದ್ದ ಕಾರಣದಿಂದ ಅದರಲ್ಲೂ ಶಾಸಕರು ಹಾಗೂ ಸಂಸದರು ತೀರ್ಥಹಳ್ಳಿಯಲ್ಲಿ ಇದ್ದ ಕಾರಣದಿಂದ ಕುತೂಹಲ ಮೂಡಿಸಿತ್ತು. ಆದರೆ ಇಬ್ಬರು ಪಟ್ಟಣ ಪಂಚಾಯತ್ ಬಳಿ ಬಾರದ ಹಿನ್ನಲೆ ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ 8 ಮತ್ತು ಬಿಜೆಪಿ 6 ಮತಗಳಿಂದ ಕೂಡಿದ್ದು ರತ್ನಾಕರ ಶೆಟ್ಟಿ ಜಯಶಾಲಿಯಾಗಿದ್ದಾರೆ.












