ಇತ್ತೀಚಿನ ಸುದ್ದಿ
ಕಾಂಗ್ರೆಸ್ ನಾಯಕ ಹರಿಪ್ರಸಾದ್ ಯಾಕೆ ಹಂಗೆ ಹೇಳಿದ್ರು ಗೊತ್ತಿಲ್ಲ, ಅವರು ಸ್ವಲ್ಪ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ: ಮುಖ್ಯಮಂತ್ರಿ ಬೊಮ್ಮಾಯಿ
18/01/2023, 16:19

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.comm
ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಏಕೆ ಹಾಗೇ ಹೇಳಿದ್ರೋ ಗೊತ್ತಿಲ್ಲ, ಸ್ವಲ್ಪ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ. ಅವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಈ 17 ಜನ ಏನು ಮಾಡಿದ್ರು ಅದನ್ನೇ ಅವರ ನಾಯಕರು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೀರೂರಿನಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, 2007ರಲ್ಲಿ ಅವರ ಇಂದಿನ ನಾಯಕರು ಜೆಡಿಎಸ್ ಗೆ ರಾಜೀನಾಮೆ ನೀಡಿದ್ರು. ಕಾಂಗ್ರೆಸ್ ಸೇರಿ ಹೇಗೆ ಗೆದ್ದರು. ಆ 17 ಜನರು ಏನು ಮಾಡಿದ್ದಾರೋ ಅದನ್ನ ಅವರ ನಾಯಕರು ಮಾಡಿದ್ದಾರೆ. ಈ ಮಾತು ಇವರಿಗೆ ಅನ್ವಯಿಸಿದರೆ ಅವರಿಗೂ ಅನ್ವಯಿಸುತ್ತೆ ಎಂದರು.