2:40 AM Sunday11 - May 2025
ಬ್ರೇಕಿಂಗ್ ನ್ಯೂಸ್
Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ…

ಇತ್ತೀಚಿನ ಸುದ್ದಿ

ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರ್ಪಡೆ: ಇದೀಗ ಚೆಂಡು ಬಿಜೆಪಿ ರಾಜ್ಯ ನಾಯಕರ ಅಂಗಳಕ್ಕೆ

07/05/2022, 13:50

ಉಡುಪಿ(reporterkarnataka.com):  ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಸೇರ್ಪಡೆ ಕುರಿತು ರಾಜ್ಯ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳುವರು ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಜಿಲ್ಲಾ ಘಟಕದ ಅಭಿಪ್ರಾಯವನ್ನು ರಾಜ್ಯ ನಾಯಕರಿಗೆ ತಿಳಿಸಲಾಗಿದೆ. ಕಾರ್ಯಕರ್ತ ರೊಂದಿಗೆ ಸಮಾಲೋಚಿಸಿ ನಾವು ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ ಎಂದು ನುಡಿದರು.

ರಾಜ್ಯ ನಾಯಕರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಮ್ಮ ಸಂಪೂರ್ಣ ಬೆಂಬಲವಿದೆ. ಪ್ರಮೋದ್ ಅವರನ್ನು ಪಕ್ಷಕ್ಕೆ ಸೇರಿಸಬೇಕೇ ಅಥವಾ ಬೇಡವೇ ಎಂಬ ಅಂತಿಮ ತೀರ್ಮಾನವನ್ನು ರಾಜ್ಯ ನಾಯಕರು ಕೈಗೊಳ್ಳುವರು ಎಂದು ಸುರೇಶ್ ನಾಯಕ್ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಿಲ್ಲಾಧ್ಯಕ್ಷರು, ಕಾರ್ಕಳ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ನುಡಿದರು.

ಬಿಜೆಪಿ ತತ್ವ, ಸಿದ್ಧಾಂತವನ್ನು ಒಪ್ಪಿ ಬರುವ ಯಾರನ್ನೇ ಆದರೂ ಪಕ್ಷ ಸ್ವಾಗತಿಸುತ್ತದೆ. ಅದು ಪ್ರಮೋದ್ ಮಧ್ವರಾಜ್ ಇರಬಹುದು ಅಥವಾ ಇನ್ಯಾರೇ ಆಗಿರಬಹುದು ಎಂದರು.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು,ಬಿಜೆಪಿ ಎಂದೂ ಕಾಂಗ್ರೆಸ್ ಆಗಲು ಸಾಧ್ಯವಿಲ್ಲ. ಬಿಜೆಪಿ ಗಟ್ಟಿಯಾದ ಸಿದ್ದಾಂತವನ್ನು ಹೊಂದಿದೆ. ಈ ಸಿದ್ಧಾಂತದ ಚೌಕಟ್ಟನ್ನು ಮೀರಿ ಯಾವ ನಾಯಕರೂ ಬೆಳೆಯಲು ಸಾಧ್ಯವಿಲ್ಲ. ನಮ್ಮ ಪಕ್ಷ ಎಂದೂ ವ್ಯಕ್ತಿ, ಕುಟುಂಬ ಆಧಾರಿತ ಪಕ್ಷವಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು