10:17 PM Sunday14 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ

14/12/2025, 22:17

ಹಾವೇರಿ(reporterkarnataka.com): ಓಟ್ ಚೋರಿ ಹೆಸರಿನಲ್ಲಿ ಕಾಂಗ್ರೆಸ್ ನವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ‌. ಅದರಿಂದ ಏನೂ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಓಟ್ ಚೋರಿ ಸುಳ್ಳನ್ನು ಸತ್ಯ ಮಾಡುವ ಅಭಿಯಾನ ಬಹಳಷ್ಟು ಕಾಂಗ್ರೆಸ್ ನಾಯಕರಿಗೆ ಅದರ ಬಗ್ಗೆ ನಂಬಿಕೆ ಇಲ್ಲ. ಅವರ ಪ್ರತಿಷ್ಠೆಗೆ ಅಲ್ಲಿಗೆ ಹೋಗುತ್ತಿದ್ದಾರೆ. ಸುಳ್ಳು ಸಾವಿರ ಬಾರಿ ಹೇಳಿ ಸತ್ಯ ಮಾಡಲು ಹೊರಟವರ ಮೇಲೆ ಕಾಂಗ್ರೆಸ್ ನವರಿಗೆ ನಂಬಿಕೆ ಇದೆ. ಅದರಿಂದ ಏನೂ‌ ಆಗಲ್ಲ. ಬಿಹಾರ್ ನಲ್ಲಿ ಇದನ್ನೇ ಮುಂದಿಟ್ಟುಕೊಂಡು ಚುನಾವಣೆ ಮಾಡಿದರು. ಅಲ್ಲಿ ಕಾಂಗ್ರೆಸ್ ಅತ್ಯಂತ ಕಡಿಮೆ ಸ್ಥಾನ ಪಡೆಯಿತು. ಅದರಿಂದ ಇನ್ನೂ ಪಾಠ ಕಲಿತಿಲ್ಲ ಅಂದರೆ ಏನು ಮಾಡಲು ಆಗುವುದಿಲ್ಲ ಎಂದು ನುಡಿದರು.

*ಸತ್ಯ ಹೊರಬರುತ್ತದೆ:*
ಆಳಂದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತಿದಾರ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಾರ್ಜ್ ಶೀಟ್ ಸಲ್ಲಿಸಿದ ತಕ್ಷಣ ಏನೂ ಆಗಲ್ಲ. ಕೋರ್ಟ್ ನಲ್ಲಿ ಸಾಬೀತಾಗಬೇಕು. ಯಾವ ಸಂದರ್ಭದಲ್ಲಿ ಎಸ್ ಐ ಟಿ ರಚನೆ ಆಗಿದೆ. ಎಸ್ ಐಟಿ ಯಾವ ರೀತಿ ತನಿಖೆ ಮಾಡಿದೆ. ಇಲೆಕ್ಷನ್ ಕಮಿಷನ್ ಆಗಲೇ ಸ್ಪಷ್ಟನೆ ನೀಡಿದೆ. ಆರು ಸಾವಿರ ಮತ ಕಡಿತ ಮಾಡುವಂತೆ ಅರ್ಜಿ ಬಂದರೂ ಕೇವಲ 18 ಮತ ಕಡಿತ ಮಾಡಿದ್ದಾರೆ. ಹೀಗಾಗಿ ಕೋರ್ಟ್ ನಲ್ಲಿ ಸತ್ಯ ಹೊರಬರುತ್ತದೆ. ಚುನಾವಣಾ ಆಯೋಗದ ಪಾತ್ರ ಏನು ಸತ್ಯಾಂಶ ಏನು ಎಲ್ಲವೂ ಹೊರ ಬರುತ್ತದೆ ಎಂದು ಹೇಳಿದರು.

*ನೈತಿಕ ಪೊಲೀಸ್ ಗಿರಿ ಒಪ್ಪುವುದಿಲ್ಲ:*
ಸವಣೂರಿನಲ್ಲಿ ಶಿಕ್ಷಕನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೈತಿಕ ಪೊಲಿಸ್ ಗಿರಿ ಒಪ್ಪುವುದಿಲ್ಲ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಅದರ ಬದಲು ರಸ್ತೆಯಲ್ಕಿ ಮೆರವಣಿಗೆ ಮಾಡಿ ಬಟ್ಟೆ ಹರಿಯುವುದು ಸರಿಯಲ್ಲ. ಅಮಾನವೀಯವಾಗಿ ಮಾಡುವ ಕೃತ್ಯಕ್ಕೆ ಅವಕಾಶ ಕೊಡಬಾರದು. ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ ಕಾನೂನು ಕೈ ತೆಗೆದುಕೊಂಡಿದ್ದಾರೆ. ಆತ ತಪ್ಪು ಮಾಡಿದ್ದರೆ ಶಿಕ್ಷೆ ಆಗಬೇಕು. ಅದಕ್ಕಿಂತ ಮುಂಚೆ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿರುವುದು ಅನಾಗರಿಕತೆ. ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶ ಇಲ್ಲ. ಇಲ್ಲಿ ಪೊಲೀಸರು ನಿಷ್ಕ್ರಿಯ ಆಗಿದ್ದಾರೆ. ಅವರ ನಿರ್ಲಕ್ಷ್ಯದಿಂದ ಇದೆಲ್ಲಾ ಆಗಿದೆ. ಹಲವು ರೇಪ್ ಪ್ರಕರಣಗಳು ನಡೆದರೂ ಪುಂಡ ಪೋಕರಿಗಳನ್ನೇ ಹಿಡಿದಿಲ್ಲ. ಕಾನೂನು ಉಲ್ಲಂಘನೆ ಮಾಡುವವರಿಗೆ ಪ್ರೋತ್ಸಾಹ ಕೊಟ್ಟಿದ್ದಕ್ಕೆ ಇಂತಹ ಪ್ರಕರಣ ನಡೆಯುತ್ತಿವೆ. ಹೀಗಾಗಿ ಇದೆಲ್ಲಾ ಆಗುತ್ತಿದೆ. ಇಲ್ಲದಿದ್ದರೆ ಇದನ್ನು ತಡೆಯಬಹುದಿತ್ತು ಒಂದು ವರ್ಗ ಓಲೈಸುವ ಕೆಲಸದ ಪರಿಣಾಮ ಈ ರೀತಿ ನಡೆದಿದೆ ಓಲೈಕೆ ರಾಜಕಾರಣದ ಪ್ರತಿಬಿಂಬ ಇದು ಎಂದು ಆರೋಪಿಸಿದರು.
ಸ್ಥಳೀಯ ಶಾಸಕರು ಕೆಲವರು ನೀರು ಹಾಕುತ್ತಾರೆ, ಕೆಲವರು ಪೆಟ್ರೋಲ್ ಹಾಕುತ್ತಾರೆ ಎಂದು ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ನೀರು ಹಾಕುತ್ತಾರೆ, ಯಾರು ಪೆಟ್ರೋಲ್ ಹಾಕುತ್ತಾರೆ ಎಂದು ಶಾಸಕರೇ ಹೇಳಬೇಕು. ನಾವು ಆರೋಪಿ ಪರ ಮಾತನಾಡುತ್ತಿಲ್ಲ. ತಪ್ಪು ಮಾಡಿದವರನ್ನೆಲ್ಲ ಚಪ್ಪಲಿಯಲ್ಲಿ ಹೊಡೆಯುತ್ತಾರಾ? ಹಾನಗಲ್ ನಲ್ಲಿ ರೇಪ್ ಮಾಡಿದವರನ್ನು ಚಪ್ಪಲೊಯಲ್ಲಿಯೇ ಹೊಡೆದು ಕರೆದುಕೊಂಡು ಹೋಗಿದ್ದರಾ ಎಂದು ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು