ಇತ್ತೀಚಿನ ಸುದ್ದಿ
ಇಹ ಲೋಕ ತ್ಯಜಿಸಿದ ಕಾಮಿಡಿ ಕಿಲಾಡಿ ; ರಾಕೇಶ್ ಪೂಜಾರಿ ಇನ್ನೂ ನೆನಪು ಮಾತ್ರ !
12/05/2025, 07:51

ಉಡುಪಿ(reporterkarnataka.com)
: ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಸೀಸನ್ 3ರ ವಿನ್ನರ್ ಉಡುಪಿಯ ರಾಕೇಶ್ ಪೂಜಾರಿ ಸೋಮವಾರ ನಿಧನರಾಗಿದ್ದಾರೆ.
ತನ್ನ ಹಾಸ್ಯದ ಮೂಲಕ ಕರುನಾಡ ಮನಗೆದ್ದ ಕಲಾವಿದ, ಕಿರುತೆರೆ, ಸಿನಿಮಾ ಲೋಕದಲ್ಲೂ ಛಾಪು ಮೂಡಿಸಿದ್ದ 34 ವರ್ಷದ ರಾಕೇಶ್ ಪೂಜಾರಿ ಸೋಮವಾರ(ಮೇ 12)ಮುಂಜಾವಿನ ವೇಳೆಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಕಳದಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭ ಹಠಾತ್ ಹೃದಯಾಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ ಎಂದು ಎನ್ನಲಾಗಿದೆ.
ಕಿರುತೆರೆಯಲ್ಲಿ ರಾಕೇಶ್ ಜನಪ್ರಿಯತೆಯನ್ನು ಗಳಿಸಿದ್ದರು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ನಟಿಸಿದ್ದರು. ಸುದೀಪ್ ಅವರ ‘ಪೈಲ್ವಾನ್’ ಚಿತ್ರ ಸೇರಿದಂತೆ ಅನೇಕ ಕನ್ನಡ ಹಾಗೂ ತುಳು ಸಿನಿಮಾಗಳಲ್ಲಿಯೂ ರಾಕೇಶ್ ನಟಿಸಿದ್ದರು.