ಇತ್ತೀಚಿನ ಸುದ್ದಿ
ಅಪಘಾತದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಖ್ಯಾತ ರಂಗಕರ್ಮಿಯ ಪುತ್ರಿ ಭವ್ಯಾರ ನೆರವಿಗೆ ಬನ್ನಿ…
31/12/2025, 20:48
ಮಂಗಳೂರು(reporterkarnataka.com): ಖ್ಯಾತ ನಾಟಕಕಾರ, ರಂಗಕರ್ಮಿ ದಿವಂಗತ ಕಲ್ಲಡ್ಕ ಶಾಂತರಾಮ ಆಚಾರ್ಯರ ಪುತ್ರಿ ಭವ್ಯ ಆಚಾರ್ಯ ಅವರು ತೀವ್ರವಾದ ಅಪಘಾತದಿಂದಾಗಿ ಕಳೆದ ಹಲವು ದಿನಗಳಿಂದ ಮಂಗಳೂರಿನ First neuro ಆಸ್ಪತ್ರೆಯಲ್ಲಿ ತೀವ್ರನಿಗಾ ವಿಭಾಗದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ದಾಖಲಾಗಿರುತ್ತಾರೆ.
ಆಸ್ಪತ್ರೆ ವೆಚ್ಚವು ಕುಟುಂಬದವರ ಕೈಮೀರಿ ಸಾಗುತ್ತಿದೆ. ದುಡಿಯುವ ಕೈ ಕೂಡ ಆಸ್ಪತ್ರೆಯಲ್ಲಿ ಇರಬೇಕಾದ ಅನಿವಾರ್ಯತೆಯೂ ಇದೆ.
ಕಷ್ಟದಲ್ಲಿ ಕೈ ಜೋಡಿಸುವ ಸಹೃದಯಿಗಳು ತಮ್ಮ ಕೈಯಿಂದ ಆದಷ್ಟು ಗರಿಷ್ಠ ಧನಸಹಾಯ ನೀಡಿ ಸಹಕರಿಸಬೇಕಾಗಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಸಾರ್ವಜನಿಕರಲ್ಲಿ ಕೈ ಮುಗಿದು ವಿನಂತಿಸಿದೆ. ಸಹೃದಯರು ನೆರವಿನ ಹಸ್ತ ಚಾಚಬೇಕಾಗಿ ವಿನಂತಿ.
ಧನಸಹಾಯ ನೀಡಲಿಚ್ಚಿಸುವವರು ಈ ಸ್ಕ್ಯಾನರ್ ಗೆ ಅಥವಾ ಪ್ರತಿಷ್ಠಾನದ ಯೋಗೀಶ್ ಅವರ ಫೋನ್ ಪೇ ಸಂಖ್ಯೆ 9480016296 ಗೆ ಕಳುಹಿಸಿ ಸಹಕರಿಸಿ.












