ಇತ್ತೀಚಿನ ಸುದ್ದಿ
ಕಾಫಿನಾಡಿನಲ್ಲಿ ಕಾಡುಕೋಣ ದಾಳಿಗೆ 73ರ ಹರೆಯದ ವೃದ್ದ ದಾರುಣ ಸಾವು: ತೋಟದಲ್ಲಿ ನಡೆದ ದುರ್ಘಟನೆ
06/02/2025, 20:15

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಡುಕೋಣ ದಾಳಿಗೆ ವೃದ್ಧರೊಬ್ಬರು ಸಾವನ್ನಪ್ಪಿದ ಘಟನೆ ಕಳಸ ತಾಲೂಕಿನ ಹಳುವಳ್ಳಿ ಸಮೀಪದ ಲಲಿತಾದ್ರಿ ಗ್ರಾಮದಲ್ಲಿ ನಡೆದಿದೆ.
ರಘುಪತಿ (73) ಕಾಡುಕೋಣದ ದಾಳಿಗೆ ಸಾವನ್ನಪ್ಪಿದ್ದ ಕೃಷಿಕ. ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಕಾಡುಕೋಣ ದಾಳಿ ಮಾಡಿತ್ತು. ತೋಟಕ್ಕೆ ಹೋಗಿದ್ದ ರಘುಪತಿಯವರು
ಫೋನ್ ರಿಸೀವ್ ಮಾಡದಿದ್ದಾಗ ಮನೆಯವರು
ತೋಟಕ್ಕೆ ಹುಡುಕಿಕೊಂಡು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಮಧ್ಯಾಹ್ನ ಮನೆಯಿಂದ ಕಾಫಿ ತೋಟಕ್ಕೆ ರಘುಪತಿ ಅವರು ತೆರಳಿದ್ದರು. ತೋಟದ ಸುತ್ತ 6 ಅಡಿ ಬೇಲಿ ಮಾಡಿದ್ರು ಅದನ್ನ ದಾಟಿ ಕಾಡುಕೋಣ ಬಂದಿದೆ.
ಕಾಡುಕೋಣ ದಾಳಿಯಿಂದ ಕೃಷಿಕನ ಸಾವಿಗೆ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರಂತರ ಕಾಡುಕೋಣ ಹಾವಳಿಂದ ಬೆಳೆಗಾರರು, ಸ್ಥಳಿಯರು ಕಂಗಾಲಾಗಿದ್ದಾರೆ.
ರಸ್ತೆಗಳಲ್ಲಿಯೂ ಕಾಡು ಕೋಣಗಳು ಅಡ್ಡಲಾಗಿ ನಿಲ್ಲುತ್ತವೆ.ಹಲವು ಬಾರಿ ಮನವಿ ಮಾಡಿದ್ರು ಅರಣ್ಯ ಇಲಾಖೆ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.