ಇತ್ತೀಚಿನ ಸುದ್ದಿ
ಕಾಫಿನಾಡಿನಲ್ಲಿ ಭಾರೀ ಮಳೆ: ಮುಳ್ಳಯ್ಯನಗಿರಿ ರಸ್ತೆಯಲ್ಲಿ ಉರುಳಿದ ಬೃಹತ್ ಮರ; ತಾಸುಗಟ್ಟಲೆ ಟ್ರಾಫಿಕ್ ಜಾಮ್
22/07/2023, 20:20
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ವರ್ಷಧಾರೆಯಾಗುತ್ತಿದ್ದು, ಮುಳ್ಳಯ್ಯನಗಿರಿ ಮಾರ್ಗದಲ್ಲಿ ರಸ್ತೆಗೆ ಬೃಹತ್ ಮರವೊಂದು ಬಿದ್ದು
ತಾಸುಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು.
ನಗರದ ಹೊರಹೊಲಯದ ಅಲ್ಲಂಪುರದಲ್ಲಿ ಘಟನೆ ನಡೆದಿದೆ. ಮುಳ್ಳಯ್ಯನಗಿರಿ ಮಾರ್ಗದ ಅಲ್ಲಂಪುರ ಗ್ರಾಮದಲ್ಲಿ ಮರ ಧರಾಶಾಹಿತಾಗಿದೆ. ಇದರಿಂದ ಅಲ್ಲಂಪುರದಿಂದ ಕೈಮರ ಚೆಕ್ ಪೋಸ್ಟ್ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಮರ ತೆರವುಗೊಳಿಸಲು ಸ್ಥಳೀಯರ ಹರಸಾಹಸ ಪಡಬೇಕಾಯಿತು. ಮುಳ್ಳಯ್ಯನಗಿರಿಗೆ ಬಂದ ಪ್ರವಾಸಿಗರು ಗಂಟೆಗಟ್ಟಲೆ ನಿಂತಲ್ಲೇ ಕಾಯಬೇಕಾಯಿತು.