ಇತ್ತೀಚಿನ ಸುದ್ದಿ
ಕಾಫಿನಾಡಿನಲ್ಲಿ ಶ್ರದ್ಧಾ ಭಕ್ತಿಯಿಂದ ವರಮಹಾಲಕ್ಷ್ಮಿ ಹಬ್ಬ ಆಚರಣೆ: ಮನೆಯಲ್ಲಿ ಸುಖ, ಶಾಂತಿ, ಐಶ್ವರ್ಯ ನೆಲೆಸಲು ವಿಶೇಷ ಪೂಜೆ
25/08/2023, 20:26
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಬಣಕಲ್, ಕೊಟ್ಟಿಗೆಹಾರ, ಬಾಳೂರು ಸುತ್ತಮುತ್ತ ಮಹಿಳೆಯರು ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು. ಅತ್ತಿಗೆರೆ ಗೃಹಿಣಿ ಸಾವಿತ್ರಿ ಮಾತನಾಡಿ’ ಲಕ್ಷ್ಮಿ ಶುದ್ದತೆಯ ಸಂಕೇತವಾಗಿದೆ. ಗೃಹಿಣಿಯರು ಬೆಳಿಗ್ಗೆ ಬೇಗನೇ ಎದ್ದು ಮನೆ ಸ್ವಚ್ಚತೆಗೊಳಿಸಿ ರಂಗೋಲಿ ತಳಿರು ತೋರಣಗಳಿಂದ ಲಕ್ಷ್ಮಿಯನ್ನು ಅಲಂಕರಿಸಿ ಶುಭ್ರ ಬಟ್ಟೆ ತೊಟ್ಟು ಮಡಿಯಲ್ಲಿ ನೈವೇದ್ಯ ತಯಾರಿಸಲಾಗುತ್ತದೆ. ಬೆಳಿಗ್ಗೆಯಿಂದ ವೃತ ಆಚರಿಸುವ ಆಚರಣೆಯಿದೆ. ಲಕ್ಷ್ಮಿ ಮುಂದೆ ಹಣ,ಚಿನ್ನ, ಬಳೆ, ಹಣ್ಣು,ವಿವಿಧ ಸಿಹಿ,ಅರಿಶಿಣ,ಕುಂಕುಮ ಇಟ್ಟು ವರ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.ಮನೆಯಲ್ಲಿ ನೆಮ್ಮದಿ, ಶಾಂತಿ, ಸುಖ, ಸಮೃದ್ಧಿ, ಐಶ್ವರ್ಯ ನೆಲೆಸಲು ವರಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ’ ಎಂದರು.
ಕೊಟ್ಟಿಗೆಹಾರದ ಅತ್ತಿಗೆರೆಯ ಸುತ್ತಮುತ್ತಲಿನ ಗೃಹಿಣಿಯರು ಸೇರಿ ವರಮಹಾಲಕ್ಷ್ಮಿ ಪೂಜೆಯನ್ನು ಸಂಭ್ರಮದಿಂದ ಆಚರಿಸಿದರು. ಬಂದ ಗೃಹಿಣಿಯರಿಗೆ ಅರಿಶಿಣ ಕುಂಕುಮ, ಬಳೆ ನೀಡಲಾಯಿತು. ಈ ಸಂದರ್ಭದಲ್ಲಿ ಗೃಹಿಣಿಯರಾದ ಜ್ಯೋತಿ, ಸಾವಿತ್ರಿ, ಪಾರ್ವತಿ ನಾಗೇಶ್,ಲಕ್ಷ್ಮಿ,ವಿನುತ ಪವಿನ್, ದೀಪಾ ನವೀನ್, ಪ್ರತಿಷ್ಠ, ಅಮೃತ ಮತ್ತಿತರರು ಇದ್ದರು.