ಇತ್ತೀಚಿನ ಸುದ್ದಿ
ಕಾಫಿನಾಡಿನಲ್ಲಿ ಸಾಮರಸ್ಯದ ಹೆಜ್ಜೆ: ವಿವಾದಿತ ಸ್ಥಳದಲ್ಲಿದ್ದ ಸಮಾಧಿ ಶಿಲುಬೆ ತೆರವುಗೊಳಿಸಿದ ಕ್ರೈಸ್ತ ಸಮುದಾಯ
06/04/2022, 12:22
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ಪಟ್ಟಣದ ಹೃದಯ ಭಾಗದಲ್ಲಿದ್ದ ವಿವಾದಿತ ಸಮಾಧಿಯ ಶಿಲುಬೆಯನ್ನು ಕ್ರೈಸ್ತ.ಸಮುದಾಯ ತೆರವುಗೊಳಿಸಿದೆ. ಆ ಮೂಲಕ ಪಟ್ಟಣ ಪಂಚಾಯಿತಿಯಿಂದ ನಡೆಯುತ್ತಿದ್ದ ಅಭಿವೃದ್ಧಿ ಕಾರ್ಯಕ್ಕೆ ಸಾಥ್ ನೀಡಿದೆ.
ನೂರಾರು ವರ್ಷಗಳಿಂದ ಪಟ್ಟಣದ ಹೃದಯಭಾಗದ ವಿವಾದಿತ ಸ್ಥಳದಲ್ಲಿದ್ದ ಶಿಲುಬೆಯನ್ನು ಹಲವು ಬಾರಿ ತೆರವುಗೊಳಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿತ್ತು. ಇದೀಗ ಸಾಮರಸ್ಯದ ಮೂಲಕ ಕ್ರೈಸ್ತರ ಸಮಾಧಿಯ ಶಿಲುಬೆಯನ್ನು ತೆರವುಗೊಳಿಸಲಾಗಿದೆ.
ನೂರಾರು ವರ್ಷಗಳ ಹಿಂದೆ ಕ್ರೈಸ್ತ ಸಮುದಾಯ ಸ್ಯಾಮ್ಯುಯಲ್ ಸುಸ್ಮಾನ್ ಎನ್ನುವ ವ್ಯಕ್ತಿ ಮೃತಪಟ್ಟಿದ್ದರು. ಆ ವ್ಯಕ್ತಿ ಅಂತ್ಯಸಂಸ್ಕಾರವನ್ನು ಬಸ್ ನಿಲ್ದಾಣ ಎದುರಿನ ಜಾಗದಲ್ಲಿ ಮಾಡಲಾಗಿತ್ತು.
ಈ ನಿಟ್ಟಿನಲ್ಲಿ ಶಾಂತಿಯುತವಾಗಿ ಮಾತುಕತೆ ನಡೆಸಿ ವಿವಾದವನ್ನು ಪಟ್ಟಣ ಪಂಚಾಯಿತಿ ಬಗೆಹರಿಸಿದೆ. ಸಮಾಧಿ ತೆರವುಗಳಿಸಿದ ಜಾಗದಲ್ಲಿ ಪಟ್ಟಣ ಪಂಚಾಯಿತಿಯ ಮಳಿಗೆಗಳ ನಿರ್ಮಾಣ ಮಾಡಲಿದೆ.
ತೆರವುಳಿಸಿದ ಸಮಾಧಿಯ ಶಿಲುಬೆಗೆ ಮತ್ತೆ ಕ್ರೈಸ್ತರ ಸ್ಮಶಾನದಲ್ಲಿ ಪೂಜಾ ವಿಧಿ ವಿಧಾನದ ಮೂಲಕ ನಮನ ಸಲ್ಲಿಸಲಾಗಿದೆ.