ಇತ್ತೀಚಿನ ಸುದ್ದಿ
ಕಾಫಿನಾಡಿನಲ್ಲಿ ಬೆಟ್ಟದ ನೆಲ್ಲಿಕಾಯಿಗೆ ಮಾರು ಹೋದ ಮುಖ್ಯಮಂತ್ರಿ!: ಆಮ್ಲ ತಿಂದು ಬಾಯಿ ಚಪ್ಪರಿಸಿದ ಬೊಮ್ಮಾಯಿ!!
18/01/2023, 21:34
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆಲ್ಲಿಕಾಯಿ ಸವಿದು ಬಾಯಿ ಚಪ್ಪರಿಸಿದ ಘಟನೆ ಕಾಫಿನಾಡಿನಲ್ಲಿ ಬುಧವಾರ ನಡೆಯಿತು. ಮುಖ್ಯಮಂತ್ರಿ ಅವರು ಸವಿದದ್ದು ಅಂತಿಂಥ ನೆಲ್ಲಿಕಾಯಿ ಅಲ್ಲ, ಬೆಟ್ಟದ ಅಪ್ಪಟ ನೆಲ್ಲಿಕಾಯಿ.


ಇದೆಲ್ಲ ನಡೆದದ್ದು ಚಿಕ್ಕಮಗಳೂರು ಹಬ್ಬದಲ್ಲಿ. ಸಂಜೆ 6 ಗಂಟೆಗೆ ಚಿಕ್ಕಮಗಳೂರು ಹಬ್ಬಕ್ಕೆ ಚಾಲನೆ ನೀಡಿದ ಅವರು ಬಳಿಕ ಸಿಎಂ ಕೃಷಿ ಮೇಳವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಳಿಗೆಗಳನ್ನು ವೀಕ್ಷಿಸಿದ ಅವರು ಬೆಟ್ಟದ ನೆಲ್ಲಿಕಾಯಿ ಸವಿದರು.
ಚಿಕ್ಕಮಗಳೂರು ಉತ್ಸವವನ್ನು ನಗರದ ಎಐಟಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ.














