11:12 PM Tuesday9 - December 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು ನಗರದಲ್ಲಿ ಕ್ವಾಂಟಮ್ ಮೆಟೀರಿಯಲ್ಸ್ ನೆಟ್‌ವರ್ಕ್ (Q-MINt) ಸ್ಥಾಪಿಸಲು ಪ್ರಧಾನಿಗೆ ಸಿಎಂ ಪತ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನೆಗಳ ಸಮರ್ಪಕ ಜಾರಿಗೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೆಎಸ್ಸಾರ್ಟಿಸಿ ಬಸ್ ಪಲ್ಟಿ; ಶಾಲಾ ವಿದ್ಯಾರ್ಥಿಗಳು ಸೇರಿದಂತೆ 15 ಜನರಿಗೆ ಗಾಯ; ಕಂಡಕ್ಟರ್… ಸುವರ್ಣಸೌಧ ಮುತ್ತಿಗೆ ಹಾಕಲು ಯತ್ನ; ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಪ್ರತಿಭಟನಾಕಾರರು ಪೊಲೀಸ್… ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ನೂತನ ಪ್ರಭಾರ ಅಧ್ಯಕ್ಷರಾಗಿ ಗೀತಾ ರಮೇಶ್ ಆಯ್ಕೆ ಸಿಎ ಸೈಟ್ ನಲ್ಲಿ ಕಟ್ಟಡ ನಿರ್ಮಾಣಕ್ಕೆ ಕಾಲಮಿತಿ ಷರತ್ತು ಸಡಿಲಿಕೆಗೆ ಕ್ರಮ: ವಿಧಾನ… ಜವಾಹರಲಾಲ್ ನೆಹರು ಹೊಂದಾಣಿಕೆಯ ಶಿಲ್ಪಿಯಾಗಿದ್ದರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿದ್ವಾಯಿ ಆಸ್ಪತ್ರೆ: ಒಂದೇ ಮೂತ್ರಪಿಂಡ ಹೊಂದಿದ್ದ ವಿಲ್ಮ್ಸ್ ಟ್ಯೂಮರ್ ಕಾಯಿಲೆಪೀಡಿತ ಬಾಲಕನಿಗೆ ಯಶಸ್ವಿ… ​ಬೆಂಗಳೂರಿನಲ್ಲಿ ವಾಹನಗಳ ಸಂಖ್ಯಾ ಸ್ಫೋಟ: 1.47 ಕೋಟಿ ಜನಸಂಖ್ಯೆ; 1.23 ಕೋಟಿ ವಾಹನಗಳ… ಬೆಳಗಾವಿ ಚಳಿಗಾಲದ ಅಧಿವೇಶನದ ನಾಳೆಯಿಂದ ಆರಂಭ: ಕುಂದನಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ

ಇತ್ತೀಚಿನ ಸುದ್ದಿ

ಬೆಂಗಳೂರು ನಗರದಲ್ಲಿ ಕ್ವಾಂಟಮ್ ಮೆಟೀರಿಯಲ್ಸ್ ನೆಟ್‌ವರ್ಕ್ (Q-MINt) ಸ್ಥಾಪಿಸಲು ಪ್ರಧಾನಿಗೆ ಸಿಎಂ ಪತ್ರ

09/12/2025, 21:54

- ವಿಶ್ವದ ಕ್ವಾಂಟಮ್‌ ಭೂಪಟದಲ್ಲಿ ಬೆಂಗಳೂರು ಕೇಂದ್ರಬಿಂದುವಾಗಲು ಇದು ಅಗತ್ಯ:ಸಚಿವ ಬೋಸರಾಜು

ಬೆಂಗಳೂರು(reporterkarnataka.com): ಭಾರತದ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ‘ಕ್ವಾಂಟಮ್ ಮೆಟೀರಿಯಲ್ಸ್ ಇನ್ನೋವೇಶನ್ ನೆಟ್‌ವರ್ಕ್’ (Q-MINt) ಸ್ಥಾಪಿಸಲು ರಾಷ್ಟ್ರೀಯ ಕ್ವಾಂಟಮ್ ಮಿಷನ್ ಅಡಿಯಲ್ಲಿ 150 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಕೋರಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರ ನೇತೃತ್ವದಲ್ಲಿ ಈ ಪ್ರಸ್ತಾವನೆಯನ್ನು ರೂಪಿಸಲಾಗಿದ್ದು, ರಾಜ್ಯದ ಮಹತ್ವಾಕಾಂಕ್ಷೆಯ ‘ಕ್ವಾಂಟಮ್ ಸಿಟಿ’ ಯೋಜನೆಗೆ ಇದು ಬಹಳ ಅಗತ್ಯವಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಎನ್.ಎಸ್. ಬೋಸರಾಜು, “ಕ್ವಾಂಟಮ್ ತಂತ್ರಜ್ಞಾನಕ್ಕೆ ಮೆಟೀರಿಯಲ್ಸ್‌ಗಳೆ (Materials) ಮೂಲ ಆಧಾರ. ಸಂಶೋಧನೆ ಮತ್ತು ಕೈಗಾರಿಕಾ ಸಾಧ್ಯತೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಯೋಜನೆ ಒಂದು ‘ಗೇಮ್ ಚೇಂಜರ್’ ಆಗಲಿದೆ. ಜಾಗತಿಕ ಕ್ವಾಂಟಮ್ ಕ್ರಾಂತಿಯಲ್ಲಿ ಭಾರತವನ್ನು ಹಾಗೂ ಬೆಂಗಳೂರು ನಗರವನ್ನು ಮುಂಚೂಣಿಯಲ್ಲಿ ಇರಿಸಲು ಇದು ಬಹಳ ಅಗತ್ಯವಾಗಿದೆ,” ಎಂದು ತಿಳಿಸಿದ್ದಾರೆ.
ತಮ್ಮ ಪತ್ರದಲ್ಲಿ ಈ ಯೋಜನೆಯ ಮಹತ್ವವನ್ನು ವಿವರಿಸಿರುವ ಮುಖ್ಯಮಂತ್ರಿಗಳು, “ವಸ್ತುಗಳ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಒಂದೇ ಕಡೆ ನಡೆಯುವಂತಹ ಸ್ವಾವಲಂಬಿ ಮತ್ತು ಸುಸ್ಥಿರ ಆವಿಷ್ಕಾರದ ಪರಿಸರವನ್ನು ನಿರ್ಮಿಸುವುದು ನಮ್ಮ ಗುರಿ. ಪ್ರಸ್ತಾವಿತ Q-MINt ಕೇವಲ ರಾಜ್ಯಕ್ಕಷ್ಟೇ ಅಲ್ಲದೆ, ಇಡೀ ದೇಶದ ಕ್ವಾಂಟಮ್ ಸಂಶೋಧನೆ ಮತ್ತು ಉದ್ಯಮದ ಅಗತ್ಯಗಳನ್ನು ಪೂರೈಸುವ ರಾಷ್ಟ್ರೀಯ ಸಂಪನ್ಮೂಲವಾಗಿ ಕಾರ್ಯನಿರ್ವಹಿಸಲಿದೆ,” ಎಂದು ಪ್ರತಿಪಾದಿಸಿದ್ದಾರೆ.
ಈ ಯೋಜನೆಯು ಸ್ಥಳೀಯ ಮೂಲಸೌಕರ್ಯ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಹಾಗೂ ಅಂತರರಾಷ್ಟ್ರೀಯ ಸಹಯೋಗಕ್ಕೆ ಒತ್ತು ನೀಡಲಿದ್ದು, ಈ ನಿಟ್ಟಿನಲ್ಲಿ ಕೇಂದ್ರದೊಂದಿಗೆ ನಿಕಟವಾಗಿ ಕೆಲಸ ಮಾಡಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು