8:12 PM Monday17 - March 2025
ಬ್ರೇಕಿಂಗ್ ನ್ಯೂಸ್
Education Department | ಕನ್ನಡ ಬೋಧಿಸದ ಕೇಂದ್ರ ಪಠ್ಯಕ್ರಮ ವಿರುದ್ಧ ಕ್ರಮಕ್ಕೆ ಮುಂದಾಗಿ:… ಬಿಜೆಪಿ ತರಹ ಕೇವಲ 10% ಜನರ ಕೈಹಿಡಿದು ಶೇ. 90% ಜನರನ್ನು ಕೈಬಿಟ್ಟಿಲ್ಲ:… ಕೇಂದ್ರ ಸರಕಾರ ಕೊಟ್ಟಿರುವುದು ಸಾಲ, ನಮ್ಮ ಪಾಲಿನ ಅನುದಾನವಲ್ಲ: ಸದನದಲ್ಲಿ ಸಿಎಂ ಸಿದ್ದರಾಮಯ್ಯ… ಲೋಕಸಭೆ ಚುನಾವಣೆ ನಂತ್ರ ಗ್ಯಾರಂಟಿ ಯೋಜನೆ ನಿಂತೋಗುತ್ತೆ ಎಂದು ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತೇನ್ರೀ:… Ex CM | ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನು ಸಮೀಕ್ಷೆ ಮಾಡಿ:… ಮಳವಳ್ಳಿಯಲ್ಲಿ ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿ ಸಾವು: ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ… ಬಂಟ್ವಾಳದಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶ ಶಂಖನಾದದೊಂದಿಗೆ ಆರಂಭ ನಿಡುವಾಳೆ ರಾಮೇಶ್ವರ ದೇವಾಲಯಕ್ಕೆ ನಟ ರಮೇಶ್ ಅರವಿಂದ್ ಕುಟುಂಬ ಸಮೇತ ಭೇಟಿ: ವಿಶೇಷ… Govt Land Encroachment | ಬೆಂಗಳೂರು ನಗರದ ವಿವಿಧೆಡೆ 59.63 ಕೋಟಿ ಮೌಲ್ಯದ… PWD Minister | ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಆಗಮನ-ನಿರ್ಗಮನ ಮಾರ್ಗ ಮುಚ್ಚಿಲ್ಲ:…

ಇತ್ತೀಚಿನ ಸುದ್ದಿ

CM | ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಆಪರೇಶನ್ ಕಮಲದಿಂದಲೇ ಹೊರತು ಜನಾದೇಶದಿಂದ ಅಲ್ಲ: ಸಿಎಂ ಸಿದ್ದರಾಮಯ್ಯ

17/03/2025, 18:41

*ದಲಿತ ಸಮುದಾಯಕ್ಕೆ ಗುಜರಾತ್ ಬಿಜೆಪಿ ಸರ್ಕಾರ 2.38% ರಷ್ಟು, ಮಹಾರಾಷ್ಟ್ರ 3.6% ಹಾಗೂ ಕೇಂದ್ರ ಸರ್ಕಾರ ಕೇವಲ 2.87% ಮಾತ್ರ ಹಣ ಬಜೆಟ್ ನಲ್ಲಿ ತೆಗೆದಿಟ್ಟಿದೆ*

*ಆದರೆ ಕಾಂಗ್ರೆಸ್ ಸರ್ಕಾರ ಶೇ7.46 ರಷ್ಟು ಹಣ ಮೀಸಲಿಟ್ಟು ಖರ್ಚು ಮಾಡಿದೆ: ಸಿ.ಎಂ ವಿಶ್ಲೇಷಣೆ*


ಬೆಂಗಳೂರು(reporterkarnataka.com):
ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಆಪರೇಶನ್ ಕಮಲದಿಂದಲೇ ಹೊರತು ಜನಾದೇಶದಿಂದ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಎಸ್.ಸಿ. ಪಿ / ಟಿ ಎಸ್ ಪಿ ಕಾಯ್ದೆಯಡಿ 5 ವರ್ಷಗಳಲ್ಲಿ 35464 ಕೋಟಿ ಅನುದಾನ ಹಂಚಿಕೆ ಮಾಡಿ 22480 ಕೋಟಿ ವೆಚ್ಚ ಮಾಡಿದ್ದಾರೆ.
ಈ ಕಾಯ್ದೆ ಬಂದದ್ದಕ್ಕೆ ಜನಸಂಖ್ಯೆ ಅನುಸಾರವಾಗಿ ಹಣ ವೆಚ್ಚ ಮಾಡಬೇಕು. 17.15% ಪ.ಜಾತಿ, ಪ.ವರ್ಗ 6.95% ಎರಡೂ ಸೇರಿ 24.1% ಇದ್ದಾರೆ. ಯೋಜನೆಯ ಹಣದಲ್ಲಿ 24.1 % ಕೂಡಲೇಬೇಕು. ಮೊದಲು ಅಷ್ಟು ಖರ್ಚು ಮಾಡುತ್ತಿರಲಿಲ್ಲ. ಒಂದು ವೇಳೆ ಹಣವನ್ನು ಖರ್ಚು ಮಾಡದೆ ಹೋದರೆ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳಬಹುದು ಎಂದು ಸಿಎಂ ವಿಧಾನಸಭೆಯಲ್ಲಿ ನುಡಿದರು.
ಈ ವರ್ಷ ಖರ್ಚು ಮಾಡಲು ಸಾಧ್ಯವಾಗದಿದ್ದರೆ ಮುಂದಿನ ವರ್ಷಕ್ಕೆ ಅದು ಸೇರಿಕೊಳ್ಳುತ್ತದೆ. 39121 ಕೋಟಿ ಕಳೆದ ವರ್ಷ ಮೀಸಲಿಟ್ಟಿದ್ದು, ಈ ಸಾಲಿಗೆ 42018 ಕೋಟಿ ಮೀಸಲಿಡಲಾಗಿದೆ. ಕಾಯ್ದೆಯನ್ನುಸಂವಿಧಾನದ ಆಶಯಗಳನ್ನು ಈಡೇರಿಸಲೆಂದು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ ಇಂದಿನವರೆಗೆ ಎಸ್.ಸಿ. ಪಿ / ಟಿ ಎಸ್ ಪಿ ಕಾಯ್ದೆಯನ್ನು ಜಾರಿ ಮಾಡಿಲ್ಲ.
ಕಾಯ್ದೆ ಬಂದ ನಂತರ
ಕರ್ನಾಟಕದಲ್ಲಿ ಈ ವರ್ಷ 371273 ಕೋಟಿ ರೂ.ಗಳ ಬಜೆಟ್ ನಲ್ಲಿ 27674 ಎಸ್.ಸಿ. ಪಿ / ಟಿ ಎಸ್ ಪಿ ಗಾಗಿ ಶೇ. 7.46%ಮೀಸಲಿಟ್ಟಿದೆ. ಗುಜರಾತ್ ನಲ್ಲಿ 3,70,000 ಹಣ ಬಜೆಟ್ ನಲ್ಲಿ ಮೀಸಲಿಟ್ಟಿದ್ದು, ಎಸ್.ಸಿ. ಪಿ / ಟಿ ಎಸ್ ಪಿ ಗಾಗಿ ಶೇ 2.38% ಮೀಸಲಿಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಬಜೆಟ್ 612293 ಇದ್ದಾರೆ, 187650 3.6% ಇಟ್ಟಿದೆ ಎಂದರು.
ಕೇಂದ್ರ ಸರ್ಕಾರ 4820512 ಕೋಟಿ ಬಜೆಟ್ ಗಾತ್ರದಲ್ಲಿ ಎಸ್.ಸಿ. ಪಿ / ಟಿ ಎಸ್ ಪಿ ಗಾಗಿ 138368 ಇದ್ದು 2.87% ಮೀಸಲಿಟ್ಟಿದೆ. ಕರ್ನಾಟಕ ಮಾದರಿಯಲ್ಲೇ ಕೇಂದ್ರ ಸರ್ಕಾರ ಎಸ್.ಸಿ. ಪಿ/ ಟಿ ಎಸ್ ಪಿ ಕಾಯ್ದೆ ಜಾರಿ ಮಾಡಲಿ ಎಂದು ಸರ್ವಾನುಮತದ ನಿರ್ಣಯ ಮಾಡೋಣ ಎಂದು ಕರೆ ನೀಡಿದರು.
2019-23 ಸಾಲಿನಲ್ಲಿ ಈವರೆಗೆ ಅದಿಕಾರದಲ್ಲಿದ್ದ ಬಿಜೆಪಿ ಡೀಮ್ಡ್ ವೆಚ್ಚದಲ್ಲಿ ಏಕೆ ವೆಚ್ಚ ಮಾಡಲಿಲ್ಲ? ದಲಿತ ಸಂಘಟನೆಗಳು ಮೊದಲಿನಿಂದಲೂ ಬೇಡಿಕೆ ಯಿಟ್ಟಿರುವಂತೆ ನಮ್ಮ ಅಧಿಕಾರಾವಧಿಯಲ್ಲಿ ಕಾಯ್ದೆಯಲ್ಲಿ 7ಡಿ ತೆಗೆದು ಹಾಕಲಾಯಿತು.
ಬಿಜೆಪಿ ಯವರು ಏಕೆ ತೆಗೆಯಲಿಲ್ಲ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಇಡೀ ದೇಶದಲ್ಲಿ ಎಸ್ ಸಿ/ ಎಸ್ ಟಿ ಗಳ ಜನಸಂಖ್ಯೆ 2011ರ ಜನಗಣತಿ ಪ್ರಕಾರ ಶೇ16.6% ಎಸ್.ಸಿ ಹಾಗೂ ಶೇ 8.6% ಎಸ್.ಟಿ ಇದ್ದು, ಎರಡೂ ಸೇರಿ ಒಟ್ಟು ಶೇ27.2 % ಇದ್ದಾರೆ. ಇವರ ಜನಸಂಖ್ಯೆಗನುಗುಣವಾಗಿ ಬಿಜೆಪಿಯವರು ಖರ್ಚು ಮಾಡಲಿಲ್ಲ. ಕೇವಲ ಶೇ2.87% ಖರ್ಚು ಮಾಡಿದ್ದಾರೆ. ದೇಶದಲ್ಲಿ ಪರಿ.ಜಾ16.6% ಪಂ.ವರ್ಗ 8.6% ಸೇರಿ ಒಟ್ಟು 25.2% ಇದ್ದು ಕೇವಲ 2.87% ವೆಚ್ಚ ಮಾಡಿದ್ದಾರೆ. 7ಡಿ ಬಗ್ಗೆ ಬಹಳ ದಿನಗಳಿಂದ ಒತ್ತಾಯವಿತ್ತು. ಆದ್ದರಿಂದ ಕಳೆದ ವರ್ಷ ತಿದ್ದುಪಡಿ ತಂದು ತೆಗೆದುಹಾಕಿದೆವು
7ಸಿ ತೆಗೆದುಹಾಕಿಲ್ಲ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು