8:33 PM Sunday16 - March 2025
ಬ್ರೇಕಿಂಗ್ ನ್ಯೂಸ್
Ex CM | ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನು ಸಮೀಕ್ಷೆ ಮಾಡಿ:… ಮಳವಳ್ಳಿಯಲ್ಲಿ ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿ ಸಾವು: ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ… ಬಂಟ್ವಾಳದಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶ ಶಂಖನಾದದೊಂದಿಗೆ ಆರಂಭ ನಿಡುವಾಳೆ ರಾಮೇಶ್ವರ ದೇವಾಲಯಕ್ಕೆ ನಟ ರಮೇಶ್ ಅರವಿಂದ್ ಕುಟುಂಬ ಸಮೇತ ಭೇಟಿ: ವಿಶೇಷ… Govt Land Encroachment | ಬೆಂಗಳೂರು ನಗರದ ವಿವಿಧೆಡೆ 59.63 ಕೋಟಿ ಮೌಲ್ಯದ… PWD Minister | ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಆಗಮನ-ನಿರ್ಗಮನ ಮಾರ್ಗ ಮುಚ್ಚಿಲ್ಲ:… Home Minister | ರಾಜ್ಯದ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಸೈಬರ್ ತರಬೇತಿ: ಗೃಹ… Forest Minister | ಬೇಲೂರು ಬಳಿ ಕಾಡಾನೆ ದಾಳಿಗೆ ಮಹಿಳೆ ಸಾವು; 3… ಗುಣಮಟ್ಟದ ಕಾನೂನು ಶಿಕ್ಷಣ ಅಗತ್ಯ: ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳಾದ ಎಂ.ಎನ್.ವೆಂಕಟಾಚಲಯ್ಯ ಪ್ರತಿಪಾದನೆ ತೀರ್ಥಹಳ್ಳಿ: ಮಸೀದಿ ಬಳಿ ನಿಲ್ಲಿಸಿದ್ದ ವಾಹನ ಅಪಹರಿಸಿದ ಖದೀಮರು; 30 ಲಕ್ಷ ರೂ.…

ಇತ್ತೀಚಿನ ಸುದ್ದಿ

ಕ್ರಿಸ್ತ ಜಯಂತಿ – 2025 ಜ್ಯುಬಿಲಿ ವರ್ಷ: ಮಾ. 20- 23: ಮಂಗಳೂರಿನಲ್ಲಿ ಬೈಬಲ್ ಮಹಾ ಸಮ್ಮೇಳನ

16/03/2025, 20:27

ಮಂಗಳೂರು(reporterkarnataka.com): ಕ್ರಿಸ್ತ ಜಯಂತಿ – 2025 ಜ್ಯುಬಿಲಿ ವರ್ಷ ಹಾಗೂ ಕ್ಯಾರಿಸ್ಮಾಟಿಕ್‌ ಸೇವಾ ಸಂಚಾಲನದ ಸುವರ್ಣ ಮಹೋತ್ಸವದ ಅಂಗವಾಗಿ ಬೈಬಲ್ ಮಹಾ ಸಮ್ಮೇಳನ ಮಾರ್ಚ್ 20ರಿಂದ 23ರ ತನಕ ನಗರದ ಕುಲಶೇಖರ ಕೋರ್ಡೆಲ್ ಹೋಲಿ ಕ್ರಾಸ್‌ ಚರ್ಚ್‌ನ ತೆರೆದ ಮೈದಾನದಲ್ಲಿ ಪ್ರತಿ ದಿನ ಸಂಜೆ 4ರಿಂದ ರಾತ್ರಿ 8.30ರ ತನಕ ನಡೆಯಲಿದೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ತಿಳಿಸಿದ್ದಾರೆ.
ಈ ಪ್ರಾರ್ಥನಾ ಸಭೆಯಲ್ಲಿ ಬಲಿ ಪೂಜೆ, ಪರಮ ಪ್ರಸಾದದ ಆರಾಧನೆ, ಪ್ರವಚನ ಮತ್ತು ವಿಶೇಷ ಪ್ರಾರ್ಥನಾ ವಿಧಿ ಇರಲಿದ್ದು, ಕೇರಳದ ಆನಕ್ಕರ ಮೇರಿಯನ್‌ ರಿಟ್ರೀಟ್‌ ಸೆಂಟರಿನ ನಿರ್ದೇಶಕ ವಂದನೀಯ ಫಾದರ್‌ ಡೊಮಿನಿಕ್‌ ನಲಮನಲ್‌ ಅವರು ವಿಶೇಷ ಪ್ರಬೋಧನೆ ನೀಡಲಿದ್ದಾರೆ ಎಂದು ಪ್ರತಿಕಾ ಪ್ರಕಟನೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು