ಇತ್ತೀಚಿನ ಸುದ್ದಿ
ಚಿತ್ರದುರ್ಗ ಮುರುಘಾ ಮಠದಲ್ಲಿ ಹೆಣ್ಣು ಮಗು ಪತ್ತೆ: ಮತ್ತೊಂದು ಸಂಕಷ್ಟದಲ್ಲಿ ಶರಣರು
15/10/2022, 21:10
ಚಿತ್ರದುರ್ಗ(reporterkarnataka.com): ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಮುರುಘಾ ಶ್ರೀಗಳ ಮುರುಘಾ ಮಠದಲ್ಲಿ ಹೆಣ್ಣು ಮಗುವೊಂದು ಪತ್ತೆಯಾಗುವ ಮೂಲಕ ಮತ್ತೊಂದು ಪ್ರಕರಣ ತಲೆ ಎತ್ತಿದೆ.
ಮಠದ ಅವರಣದಲ್ಲಿ ಹೆಣ್ಣು ಮಗು ಪತ್ತೆಯಾಗಿದೆ. ಮಠದ ವಸತಿ ಶಾಲೆಯಲ್ಲಿ ಹೆಣ್ಣು ಮಗು ಪತ್ತೆಯಾಗಿದೆ. ಈ ವಸತಿ ಶಾಲೆಯು ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿದೆ ಎನ್ನುವುದು ಕುತೂಹಲಕಾರಿ ಅಂಶವಾಗಿದೆ.
ಮಠದ ವಸತಿ ಶಾಲೆಯ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಆಗಸ್ಟ್ 26ರಂದು ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ವಸತಿ ಶಾಲೆಯಲ್ಲಿದ್ದ ಮಕ್ಕಳು ಶಿಫ್ಟ್ ಮಾಡಲಾಗಿತ್ತು.
ಮಕ್ಕಳನ್ನು ಸರ್ಕಾರಿ ವಸತಿ ಶಾಲೆ, ಬಾಲ ಮಂದಿರಕ್ಕೆ ಶಿಫ್ಟ್ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆ. ಹೆಣ್ಣು ಮಗುವಿನ ಪೋಷಕರ ಬಗ್ಗೆ ವಿವರ ಲಭ್ಯವಿಲ್ಲ. ಪೋಷಕರ ಪತ್ತೆಗಾಗಿ ಮಕ್ಕಳ ರಕ್ಷಣಾ ಘಟಕ ಜಾಹೀರಾತುವನ್ನೂ ನೀಡಿದೆ. ಚಿಗುರು ಹೆಸರಿನ ನಾಲ್ಕೂವರೆ ವರ್ಷದ ಹೆಣ್ಣು ಮಗು ಇದಾಗಿದ್ದು. ಮಠದ ಹಾಸ್ಟೆಲ್ ನಲ್ಲಿ ಅನಧಿಕೃತವಾಗಿ ಮಗು ಇರಿಸಿಕೊಂಡ ಆರೋಪ ಹೊರಿಸಲಾಗಿದೆ. ಅದಲ್ಲದೆ, ಮಡಿಲು ಯೋಜನೆಗೆ ಮಗುವನ್ನು ಸೇರಿಸದ ಆರೋಪವನ್ನೂ ಮಾಡಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ, ಜಿಲಾಡಳಿತಕ್ಕೆ ದೂರು ನೀಡಿ ತನಿಖೆಗೆ ಆಗ್ರಹಿದ್ದು, ದೂರು ನೀಡಿದ ಬಳಿಕ ಅಧಿಕಾರಿಗಳು ಕೂಡ ಅಲರ್ಟ್ ಆಗಿದ್ದಾರೆ.
ಮಠದಲ್ಲಿ ಪುಟ್ಟ ಮಕ್ಕಳನ್ನು ಅನಧಿಕೃತವಾಗಿ ಇರಿಸಲಾಗಿತ್ತೆಂಬ ಆರೋಪವನ್ನು ಮುರುಘಾ ಶ್ರೀಗಳ ಮೇಲೆ ಹೊರಿಸಲಾಗಿದೆ. ಒಟ್ಟಾರೆ ಶರಣರು ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ.














