ಇತ್ತೀಚಿನ ಸುದ್ದಿ
ಚಿಕ್ಕೋಡಿ: ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ
24/09/2022, 23:45
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಜಿಲ್ಲೆಯಾದ್ಯಂತ ಕಬ್ಬಿಣ ಕಾರ್ಖಾನೆಗಳು ಹಳೆ ಬಾಕಿ ಮೊತ್ತ ಮುಳಿಸಿಕೊಂಡಿವೆ. ಮೊದಲು ಬಾಕಿ ನೀಡಬೇಕು. ಬಳಿಕ ಕಾರ್ಖಾನೆಗಳಿಗೆ ಅನುಮತಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಚಿಕ್ಕೋಡಿ ಪಟ್ಟಣದಲ್ಲಿ ಸಭೆ ನಡೆಸಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಉತ್ತರ ಕರ್ನಾಟಕ ಜಿಲ್ಲಾ ರೈತ ಸಂಘದ ಅಧ್ಯಕ್ಷ
ಮಹಾದೇವ ಮಡಿವಾಳ, ಪ್ರಸಕ್ತ ಸಾಲಿನಲ್ಲಿ ಕಬ್ಬಿಣ ಕಾರ್ಖಾನೆಗಳು ಮತ್ತೆ ಶುರು ಮಾಡುತ್ತಿವೆ. ಒಂದೇ ಒಂದು ಕಾರ್ಖಾನೆ ಕೂಡ ಇದುವರೆಗೆ ಬೆಲೆ ಘೋಷಣೆ ಮಾಡಿಲ್ಲ. ಜಿಲ್ಲಾಡಳಿತ ಕೂಡ ಇದುವರೆಗೆ ಬೆಲೆ ನಿಗದಿ ಮಾಡಿಲ್ಲ.ಬೆಲೆ ನಿಗದಿ ಮಾಡದೆಯೇ ಕಾರ್ಖಾನೆಗಳನ್ನ ಶುರು ಮಾಡಲು ಜಿಲ್ಲಾಡಳಿತ ಅನುಮತಿ ನೀಡುತ್ತಿದೆ. ಬೆಲೆ ಘೋಷಣೆ ಮಾಡದೆ ಇದ್ದರೆ ರಸ್ತೆಗೆ ಇಳಿದು ಹೋರಾಟ ಮಾಡುತ್ತೇವೆ. ರಸ್ತೆ ಬಂದ್ ಮಾಡಿ ಕಾರ್ಖಾನೆಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.