ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಬೀಡು ಬಿಟ್ಟಿರುವ 2 ಡಜನಿಗೂ ಅಧಿಕ ಕಾಡಾನೆ; ರಸ್ತೆ ತಡೆದು ಗ್ರಾಮಸ್ಥರಿಂದ ಪ್ರತಿಭಟನೆ
15/02/2024, 20:37
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬೀಟಮ್ಮ ಅಂಡ್ ಗ್ಯಾಂಗ್ ಆತಂಕ ಹಿನ್ನೆಲೆಯಲ್ಲಿ ನಾಗರಿಕರು ರಾಜ್ಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಮಗಳೂರು ಮಲ್ಲಂದೂರು ನಡುವೆ ಇರುವ ಇಂದಾವರ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಅರಣ್ಯಾಧಿಕಾರಿಗಳ ವಿರುದ್ದ ಹಳ್ಳಿಗರ ಆಕ್ರೋಶ ವ್ಯಕ್ತಪಡಿಸಿದರು. ವಾರದಿಂದ ಬೀಟಮ್ಮ ಅಂಡ್ ಗ್ಯಾಂಗ್ ಇಂದಾವರ ಸುತ್ತಮುತ್ತಾ ಬೀಡು ಬಿಟ್ಟಿದೆ. ಸುಮಾರು 24ಕ್ಕೂ ಹೆಚ್ಚು ಕಾಡಾನೆಗಳ ಹಿಂಡಿರುವ ಬೀಟಮ್ಮ ಗ್ಯಾಂಗ್ ಆತಂಕ ಸೃಷ್ಟಿಸಿದೆ. ಸ್ಥಳೀಯರು, ತೋಟಗಳಿಗೆ ಹೋಗೋದಕ್ಕೂ ಭಯ ಪಡುತ್ತಿದ್ದಾರೆ. ಆತಂಕದಲ್ಲೇ ಬದುಕುತ್ತಿದ್ದಾರೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಆಗಮಿಸುವಂತೆ ಆಗ್ರಹಿದ್ದಾರೆ.
ತಕ್ಷಣವೇ ಸೂಕ್ತ ಕ್ರಮವಹಿಸಿ ಆನೆಗಳನ್ನ ಸ್ಥಳಾಂತರಿಸುವಂತೆ ಆಗ್ರಹ ಪಡಿಸಿದ್ದಾರೆ.














