ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: 30 ಮಂಗಗಳ ಮಾರಣ ಹೋಮ; ಜ್ಞಾನ ತಪ್ಪುವ ಔಷಧವಿಟ್ಟು ತಲೆಗೆ ಹೊಡೆದು ಭೀಕರ ಹತ್ಯೆ
07/06/2024, 17:37

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಾಳೆಹಣ್ಣಿಗೆ ಜ್ಞಾನ ತಪ್ಪುವ ಔಷಧವಿಟ್ಟು 30 ಮಂಗಗಳನ್ನ ಕೊಂದ ಅಮಾನವೀಯ ಘಟನೆ ಎನ್.ಆರ್.ಪುರ ತಾಲೂಕಿನ ದ್ಯಾವಣ ಬಳಿ ನಡೆದಿದೆ.
ಮನುಷ್ಯತ್ವಹೀನರು 16 ಗಂಡು, 14 ಹೆಣ್ಣು ಮತ್ತು 4 ಮರಿಗಳ ಮಾರಣ ಹೋಮ ನಡೆಸಿದ್ದಾರೆ.
30 ಮಂಗಗಳನ್ನ ಕೊಂದು ರಸ್ತೆ ತಂದು ಪಾಪಿಗಳು ಎಸೆದು ಹೋಗಿದ್ದಾರೆ.
ಮಂಗಗಳು ಜ್ಞಾನ ತಪ್ಪಿದ ಬಳಿಕ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. 30 ಮಂಗಗಳ ತಲೆಯಲ್ಲೂ ಒಂದೇ ರೀತಿ ಗಾಯವಾಗಿ ರಕ್ತಸುರಿದು ಸಾವನ್ನಪ್ಪಿವೆ.
ಸ್ಥಳಕ್ಕೆ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಡಿ.ಎಫ್.ಓ, ಆರ್.ಎಫ್.ಓ, ಪಿ.ಎಸ್.ಐ. ಪಶುಸಂಗೋಪನೆ, ಪಶುವೈದ್ಯ, ಪಂಚಾಯಿತಿ, ಆಶಾಕಾರ್ಯರ್ತೆಯರು ಭೇಟಿ ನೀಡಿದ್ದಾರೆ.
ಮಂಗಗಳ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಂಗಗಳ ಮಾರಣ ಹೋಮಕ್ಕೆ ಪ್ರಾಣಿಪ್ರಿಯರು ಕಿಡಿ ಎನ್.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.