ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ನಕ್ಸಲ್ ಚಟುವಟಿಕೆ ಪ್ರಕರಣ; ಇಬ್ಬರು ಶಂಕಿತ ನಕ್ಸಲರು ಸೇರಿ 4 ಮಂದಿ ವಿರುದ್ಧ ಎಫ್ಐಆರ್
14/11/2024, 21:42
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಂದೂಕು ಸಮೇತ ನಾಲ್ಕು ಜನ ನಕ್ಸಲರು ಮನೆ ಮನೆ ಭೇಟಿ ಮಾಡಿ ಬಂದೂಕು ತೋರಿಸಿ ಆಹಾರ ಧಾನ್ಯಗಳನ್ನು ಕೇಳಿದ ಕುರಿತು ಎಎನ್ಎಫ್ ಪೊಲೀಸರಿಗೆ ಬಂದು ಮಾಹಿತಿ ಮೇರೆಗೆ 4 ಮಂದಿಯನ್ನು ಬಂಧಿಸಲಾಗಿದೆ.
ಮೋಸ್ಟ್ ವಾಟೆಂಡ್ ನಕ್ಸಲರಾದ ಜಾನ್@ಜಯಣ್ಣ , ಮುಂಡಗಾರು ಲತಾ ಹಾಗೂ ಇತರ ಇಬ್ಬರು ಸೇರಿದಂತೆ ನಾಲ್ಕು ಜನರ ಮೇಲೆ ಹೆಬ್ರಿ ಎ.ಎನ್.ಎಫ್ ಇನ್ಸ್ ಪೆಕ್ಟರ್
ಬಸವರಾಜ್ ಅತ್ತೆವ್ವಗೋಳ ಅವರು ನ.12 ರಂದು ಕೊಪ್ಪದ ತಾಲೂಕಿನ ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಪೊಲೀಸರು 329(4),351(2),61(2),147 ಸಹಿತ 3(5) ಬಿಎನ್ಎಸ್ ಕಲಂ 3&25 ಐಎ ಆಕ್ಟ್ 10(B),13,16,18,20,38 ಕಾನೂನು ಬಾಹಿತ ಚಟುವಟಿಕೆ ತಡೆ ಕಾಯ್ದೆ-1967 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
*ದೂರಿನ ಸಾರಾಂಶ:* ಹೆಬ್ರಿ ಎ.ಎನ್.ಎಫ್ ಇನ್ಸ್ಪೆಕ್ಟರ್ ಬಸವರಾಜ್ ಅತ್ತೆವ್ವಗೋಳ ಅವರು ನವೆಂಬರ್ 12 ರಂದು ಮಧ್ಯಾಹ್ನ 12 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಎ.ಎನ್.ಎಫ್. ಘಟಕದಲ್ಲಿ ದಿನಾಂಕ:2-12-2023 ರಿಂದ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ:10-11-2024 ರಂದು ದೇಶದ ಆಂತರಿಕ ಭದ್ರತೆಗೆ ಧಕ್ಕೆಯನ್ನು ಉಂಟುಮಾಡುವ ನಿಷೇಧಿತ ಸಂಘಟನೆಯಾದ ಸಿ.ಪಿ.ಐ.(ಮಾವೋವಾದಿ) ನಕ್ಸಲ್ ಸಂಘಟನೆಗೆ ಸೇರಿದ ಕೆಲವು ಸದಸ್ಯರುಗಳು ಮುಂಡುಗಾರು, ಯಡಗುಂದ, ಕಡೇಗುಂಡಿ ಮತ್ತು ಮುಂಡೋಡಿ ಗ್ರಾಮಗಳಲ್ಲಿ ನಕ್ಸಲ್ ಚಟುವಟಿಕೆಗಳನ್ನು ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದರಿಂದ ದಿನಾಂಕ:- 10-11-2024 ರಂದು ರಾತ್ರಿ ಸುಮಾರು 8 ಗಂಟೆ ಸಮಯಕ್ಕೆ ಕೆರೆಕಟ್ಟೆಯಿಂದ ಹೊರಟು ತಾನು ಮೇಲ್ಕಂಡ ಗ್ರಾಮಗಳಲ್ಲಿ ಕಾರ್ಯಾಚರಣೆ ಮಾಡಲು ನನ್ನ ಸಿಬ್ಬಂದಿಗಳೊಂದಿಗೆ ಕಡೇಗುಂಡಿ ಗ್ರಾಮಕ್ಕೆ ರಾತ್ರಿ ಸುಮಾರು 10 ಗಂಟೆಗೆ ಹೋಗಿ ಅಲ್ಲಿಂದ ಕಾಲ್ನಡಿಗೆ ಮುಖಾಂತರ ಕಾಡಿನ ಒಳಗಡೆ ಕಾರ್ಯಾಚರಣೆಯನ್ನು ಮಾಡುತ್ತಿರುವಾಗ ಒಂದು ಮನೆ ಕಂಡಿದ್ದು ಮನೆಯಲ್ಲಿ ಸ್ಪಲ್ಪ ಅನುಮಾನಾಸ್ಪದವಾದ ಕೆಲವು ವ್ಯಕ್ತಿಗಳು ಇರುವುದು ಕಂಡು ಬಂದಿರುತ್ತೆ. ನಾವುಗಳು ದೂರದಿಂದ ನಿಗಾ ವಹಿಸಿ ಮನೆಯ ಆವರಣದೊಳಗೆ ಹೋಗುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಓಡಿ ಹೋಗಿದ್ದು ಕಂಡು ಬಂದಿದ್ದು, ನಂತರ ನಾವು ಮನೆಗೆ ಹೋಗಿ ಮನೆಯಲ್ಲಿದ್ದವರನ್ನು ವಿಚಾರ ಮಾಡಿದಾಗ ನಾಲ್ಕು ಜನ ಬಂದೂಕುದಾರಿಗಳು ಮನೆಗೆ ಬಂದಿದ್ದು ಅದರಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಬಂದೂಕೂದಾರರು ಮನೆಯೊಳಗೆ ಬಂದಿದ್ದು ಇನ್ನು ಉಳಿದ ಇಬ್ಬರು ಹೊರಗಡೆ ನಿಂತಿದ್ದು ಮನೆಯೊಳಗೆ ಬಂದವರು ನಮಗೆ ಬಂದೂಕು ತೋರಿಸಿ ನಮಗೆ ಆಹಾರ ಧಾನ್ಯಗಳನ್ನು ಕೊಡಿ ಅಂತ ಕೇಳಿದರು. ನಾವು ಕೊಡುವಷ್ಟರಲ್ಲಿ ನೀವು ಬಂದಿರುವುದನ್ನು ನೋಡಿ ಓಡಿ ಹೋದರು ಅಂತ ತಿಳಿಸಿರುತ್ತಾರೆ. ಆಗ ತಾನು, ತಮ್ಮ ಸಿಬ್ಬಂದಿಯಾದ ಹೆಚ್ ಸಿ ರವೀಂದ್ರ ಇವರ ಮೊಬೈಲ್ ನಲ್ಲಿ ಇದ್ದ ಕೆಲವು ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಭಾವ ಚಿತ್ರಗಳನ್ನು ತೋರಿಸಿದಾಗ ಅದರಲ್ಲಿ ಒಂದು ಜಯಣ್ಣ @ ಜಾನ್ ಹಾಗೂ ಮುಂಡುಗಾರು ಲತಾ ಎಂದು ಅವರು ಗುರುತಿಸಿರುತ್ತಾರೆ. ಹಾಗೂ ಮನೆಯೊಳಗೆ ಹೋಗಿ ನೋಡಲಾಗಿ ಮೂರು ಎಸ್.ಬಿ.ಎಂ.ಎಲ್. ಬಂದೂಕುಗಳು ಹಾಗೂ ಬಂದೂಕಿಗೆ ಉಪಯೋಗಿಸುವ ಮದ್ದು-ಗುಂಡುಗಳನ್ನು ಮೂಲೆಯಲ್ಲಿ ಇಟ್ಟಿದ್ದು ಕಂಡು ಬಂದಿರುತ್ತೆ. ಆಗ ತಮ್ಮ ಸಿಬ್ಬಂದಿಗಳನ್ನು ಸುರಕ್ಷತೆಗಾಗಿ ಮನೆಯ ಸುತ್ತಾ ಪಾಯಿಂಟ್‌ಗಳನ್ನು ನೇಮಕ ಮಾಡಿ ನಂತರ ತಾನು ಇತರೆ ಸಿಬ್ಬಂದಿಯೊಂದಿಗೆ ಓಡಿ ಹೋದ ಆರೋಪಿಗಳ ಬಗ್ಗೆ ಪತ್ತೆ ಕಾರ್ಯಕ್ಕಾಗಿ ಸಿಬ್ಬಂದಿಗಳೊಂದಿಗೆ ಕಾಡಿನಲ್ಲಿ ಹೋಗಿದ್ದು, ಕಾಡಿನಲ್ಲಿ ಆರೋಪಿಗಳ ಬಗ್ಗೆ ಪತ್ತೆ ಕಾರ್ಯ ಮಾಡಿ ಠಾಣೆಗೆ ಬಂದು ದೂರನ್ನು ನೀಡಿರುತ್ತಾರೆ.