ಇತ್ತೀಚಿನ ಸುದ್ದಿ
ಚಿಕ್ಕಮಗಳೂರಿನಲ್ಲಿ ಭಾರಿ ಮಳೆ: ಮೂಡಿಗೆರೆ ಮಾಲಿಂಗ ನಾಡುನಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ; ಸಂಪರ್ಕ ಕಡಿತ
19/05/2022, 11:12
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಳೆದ 3 ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮೂಡಿಗೆರೆ ತಾಲೂಕಿನ ಮಾಲಿಂಗ ನಾಡು ಎಂಬಲ್ಲಿ ರಸ್ತೆಗೆ ಬೃಹತ್ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.
ಕುವೆ ಮಾಲಿಂಗ ನಾಡು ಸಂಪರ್ಕ ಕಡಿದು ಹೋಗಿದೆ.ಮಲೆನಾಡಿನ ದ್ಯಂತ ಬಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಆಕಾರದ ಮರ ಬಿದ್ದಿರುವುದರಿಂದ ಸಂಪರ್ಕ ಕಡಿದು ಹೋಗಿದೆ.
ಸುಗಮ ಸಂಚಾರಕ್ಕೆ ಮರ ತೆರವು ಗೊಳಿಸುವ ಕಾರ್ಯವನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ.