ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: 4 ಮಂದಿ ಅಕ್ರಮ ಬಾಂಗ್ಲಾ ಪ್ರಜೆಗಳು ಪತ್ತೆ; ಎನ್. ಆರ್. ಪುರ ಪೊಲೀಸರಿಂದ ತನಿಖೆ ಆರಂಭ
23/07/2022, 10:52
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnatak@gmail.com
ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಾಲ್ವರು ಅಕ್ರಮ ಬಾಂಗ್ಲಾ ನಿವಾಸಿಗಳು ಪತ್ತೆಯಾಗಿದ್ದಾರೆ. ಎನ್.ಆರ್.ಪುರ ತಾಲೂಕಿನ ಸಿಂಸೆಯ ಬೋವಿ ಕಾಲೋನಿನಲ್ಲಿ ಪತ್ತೆ ಹಚ್ಚಲಾಗಿದೆ.
ಅಕ್ರಮ ನಿವಾಸಿಗಳನ್ನುಅಬ್ದುಲ್, ರಹುಲ್, ಮೋಮಿನ್ ಅಲಿ ಹಾಗೂ ಸಲೀಂ ಎಂದು ಗುರುತಿಸಲಾಗಿದೆ. ಇವರು ಕಳೆದ 3 ವರ್ಷಗಳಿಂದ ಕಾಫಿನಾಡಲ್ಲಿ ಕೆಲಸ ಮಾಡುತ್ತಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇವರ ದಾಖಲೆಗಳಿಂದ ಬಾಂಗ್ಲಾದೇಶದ ಪ್ರಜೆಗಳು ಎನ್ನುವುದು ಖಚಿತವಾಗಿದೆ. ಪಶ್ಚಿಮ ಬಂಗಾಳದ ಮೂಲಕ ಕೂಲಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ
ಕಾಫಿನಾಡಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳಿರುವ ಬಗ್ಗೆ ಆರೋಪ ಕೇಳಿ ಬರುತ್ತಿತ್ತು. ಎನ್.ಆರ್.ಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.