ಇತ್ತೀಚಿನ ಸುದ್ದಿ
Chikkamagaluru | ಕಾಫಿನಾಡಲ್ಲಿ ನಿಲ್ಲದ ಕಾಡಾನೆ ಉಪಟಳ: ಹೆದ್ದಾರಿ, ಕಾಫಿ ತೋಟದಲ್ಲಿಯೂ ದಾಂಧಲೆ
07/08/2025, 21:12

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿತೋಟ-ಗ್ರಾಮ-ರಾಜ್ಯ ಹೆದ್ದಾರಿಯಲ್ಲೂ ಕಾಡಾನೆಗಳ ಉಪಟಳ ನಿಂತಿಲ್ಲ. ಮೂಡಿಗೆರೆ ತಾಲೂಕಿನ ಕುನ್ನಳ್ಳಿ ಗ್ರಾಮದಲ್ಲಿ ಕಾಫಿ ತೋಟಕ್ಕೆ ಹಾನಿಯುಂಟು ಮಾಡಿದೆ.
ಕಾಫಿತೋಟದಲ್ಲಿ ಕಾಡಾನೆ ರೌಂಡ್ಸ್ ನಿಂದ ಕಾಫಿ ತೋಟಗಳು ಹಾನಿಗೀಡಾಗಿವೆ.
ಮೂಡಿಗೆರೆ ತಾಲೂಕಿನ ಕುನ್ನಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಧರ್ಮಪಾಲ್, ರವೀಂದ್ರ, ಶ್ರೀಕಾಂತ್ ಹಾಗೂ ರವಿ ಎಂಬುವರ ತೋಟಕ್ಕೆ ಹಾನಿಯುಂಟು ಮಾಡಿದೆ.
ಕುನ್ನಳ್ಳಿ ಗ್ರಾಮದಲ್ಲಿ ಕಾಡಾನೆಯಿಂದ ವ್ಯಕ್ತಿ ಮೇಲೆ ದಾಳಿಯಾಗಿತ್ತು.ತೋಟ-ಗ್ರಾಮಗಳಲ್ಲಿ ಕಾಡಾನೆ ಓಡಾಟದಿಂದ ಸ್ಥಳೀಯರಲ್ಲಿ ಅತಂಕಕ್ಕೀಡಾಗಿದ್ದಾರೆ.
ಅರಣ್ಯ ಇಲಾಖೆಯ ವಿರುದ್ದ ಸ್ಥಳೀಯರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಡಾನೆ ಸ್ಥಳಾಂತರ,ಓಡಿಸಲು ಅನುಮತಿ ಇಲ್ಲ ಅಂತಿರೋ ಆರೋಪ ಕೇಳಿ ಬರುತ್ತಿದೆ.