1:01 PM Saturday17 - January 2026
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.…

ಇತ್ತೀಚಿನ ಸುದ್ದಿ

Chikkamagaluru | ರಸ್ತೆ ದುರಾವಸ್ಥೆ: ಪ್ರಧಾನಿ ಮೋದಿಗೆ ಕೊಪ್ಪದ ಬಾಲಕಿ ಸಿಂಧೂರ ಪತ್ರ

18/07/2025, 10:27

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com

ಚಿಕ್ಕಮಗಳೂರು ಜಿಲ್ಲೆಯ
ಕೊಪ್ಪ ತಾಲೂಕಿನ ಮಲಗಾರು ಗ್ರಾಮದ 8ನೇ ತರಗತಿಯ
ಪುಟ್ಟ ಬಾಲಕಿಯೊಬ್ಬಳು ತನ್ನೂರಿನಿಂದ ಶಾಲೆಗೆ ಸಾಗುವ ರಸ್ತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ.
ಮಳೆಗಾಲದಲ್ಲಿ ಕೆಸರುಮಯವಾಗುವ ರಸ್ತೆಯಲ್ಲಿ ಶಾಲೆಗೆ ಹೋಗುವುದು ಗುರಿ ಸಾಧನೆಯಂತೆ ಆಗುತ್ತಿದೆ. ಮನೆಯಿಂದ ಶಾಲೆಗೆ ದಿನವೂ 3-4 ಕಿ.ಮೀ. ನಡೆಯುವ ಸಿಂಧೂರ ಹೆಸರಿನ ಬಾಲಕಿ, ಗ್ರಾಮೀಣ ರಸ್ತೆಯ ದುಸ್ಥಿತಿಯಿಂದ ಬೇಸತ್ತಿದ್ದಾಳೆ. ತನ್ನ ಊರಿನ ಮುಖ್ಯ ರಸ್ತೆಯು ತುಂಬಾ ಹಾಳಾಗಿದ್ದು, ಮಳೆ ಬಂದರೆ ಓಡಾಡುವುದೇ ದುಸ್ತರವಾಗುತ್ತದೆ ಎಂದು ಹೇಳಿರುವ ಸಿಂಧೂರ, ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸಿಂಧೂರ ತನ್ನ ಪತ್ರದಲ್ಲಿ ಹೇಳಿರುವಂತೆ:

> “ನಮ್ಮ ಊರಿಗೆ ಒಂದು ಉತ್ತಮ ರಸ್ತೆ ಬೇಕಾಗಿದೆ. ಶಾಲೆಗೆ ಹೋಗುವ ಬದಿಯಲ್ಲಿ ಬೇರೆ ದಾರಿಯೇ ಇಲ್ಲ. ವಾರದಲ್ಲಿ 3-4 ದಿನ ಶಾಲೆಗೆ ಹೋಗಲು ಸಾಧ್ಯವಿಲ್ಲ. ಮಕ್ಕಳು, ಮಹಿಳೆಯರು ಎಲ್ಲರೂ ಸಮಸ್ಯೆ ಅನುಭವಿಸುತ್ತಿದ್ದಾರೆ. ದಯವಿಟ್ಟು ನಮ್ಮ ರಸ್ತೆಯನ್ನು ದುರಸ್ತಿ ಮಾಡಿಸಿ.”


ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಯಲ್ಲಿ ಪತ್ರ ಬರೆದಿರುವ ಈ ಬಾಲಕಿಯ ಹೃದಯಸ್ಪರ್ಶಿ ಮನವಿ ಇದೀಗ ಗ್ರಾಮದಲ್ಲಿಯೇ ಅಲ್ಲ, ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ.
ಪ್ರಮುಖ ವಿಷಯವೆಂದರೆ, ಈ ಭಾಗದ ರಸ್ತೆ ಮಾತ್ರ ಶಾಲೆಗಷ್ಟೇ ಅಲ್ಲದೆ, ದಿನನಿತ್ಯದ ಆರೋಗ್ಯ ಸೇವೆ, ಅಗತ್ಯ ವಸ್ತುಗಳ ಸಾಗಣೆ, ಹಾಗೂ ಎಮರ್ಜೆನ್ಸಿ ಸಂದರ್ಭಗಳಿಗೂ ಪ್ರಮುಖ ದಾರಿ. ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಸ್ಪಂದಿಸುವ ಸಮಯ ಇದಾಗಿದೆ ಎಂಬ ಅಭಿಪ್ರಾಯ ಈಗ ಸಾರ್ವಜನಿಕದಲ್ಲಿ ಮೂಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು