ಇತ್ತೀಚಿನ ಸುದ್ದಿ
Chikkamagaluru | ಜಯಪುರ ಸಾರ್ವಜನಿಕ ಆಸ್ಪತ್ರೆ ತಕ್ಷಣ ಉದ್ಘಾಟನೆಗೆ ಒತ್ತಾಯಿಸಿ ಪ್ರತಿಭಟನೆ
17/09/2025, 20:47

ಶಶಿ ಬೆತ್ತದಕೊಳಲು ಚಿಕ್ಕಮಗಳೂರು
info.reporterkarnataka@gmail.com
ಜಯಪುರದ ಸಾರ್ವಜನಿಕ ಆಸ್ಪತ್ರೆಯನ್ನು ಹದಿನೈದು ದಿನಗಳೊಳಗೆ ಉದ್ಘಾಟನೆ ಮಾಡಿ ಸಾರ್ವಜನಿಕ ಸೇವೆಗೆ ಅನುಕೂಲ ಮಾಡಬೇಕು ಎಂದು ಜಯಪುರದಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು ಕೂಡಲೇ ಉದ್ಘಾಟಿಸುವಂತೆ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ ಆಗ್ರಹಿಸಿದರು.
ಕಳೆದ ಸರ್ಕಾರದ ಅವಧಿಯಲ್ಲಿ ಆರಂಭವಾದ ಜಯಪುರ ಸಾರ್ವಜನಿಕ ಆಸ್ಪತ್ರೆ ಕಾಮಗಾರಿ ಮುಗಿದು ಅನೇಕ ತಿಂಗಳುಗಳಾದರೂ ಇನ್ನೂ ಉದ್ಘಾಟನೆ ಆಗದೆ ಸಾರ್ವಜನಿಕ ಸೇವೆ ಲಭ್ಯವಿಲ್ಲದೆ ಸುಮಾರು 20 ಕಿಮೀ ವ್ಯಾಪ್ತಿಯ ಜನತೆ ತುರ್ತು ಆರೋಗ್ಯ ಸೌಲಭ್ಯ ಸಿಗದೆ ಪರಿತಪ್ಪಿಸುವಂತಾಗಿದೆ. ಕಳೆದ ಬಾರಿ ಪ್ರತಿಭಟನೆ ಮಾಡಿದಾಗ ಉದ್ಘಾಟನೆಗೆ ಒತ್ತಾಯಿಸಿದಾಗ ಉದ್ಘಾಟನೆಗೆ ದಿನಾಂಕ ಗೊತ್ತುಪಡಿಸಿ ನಂತರ ಮುಂದೂಡಿ ಇನ್ನೂ ಉದ್ಘಾಟನೆ ಬಗ್ಗೆ ಯಾವುದೇ ಪ್ರಗತಿ ಇಲ್ಲದೆ ಇರುವುದು ಹಲವು ಸಂಶಯವನ್ನು ಮೂಡಿಸುತ್ತಿದೆ.
ಉದ್ಘಾಟನೆ ದಿನಾಂಕ ನಿಗದಿ ಪಡಿಸುವ ವರೆಗೆ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಎಂದರೂ ಕೊನೆಗೆ ವೈಧ್ಯಾಧಿಕಾರಿ ಸುಧೀಂದ್ರ ದೂರವಾಣಿ ಮೂಲಕ ಡಿ ಎಚ್ ಓ ಗೆ ಮಾತನಾಡಿ ಹದಿನೈದು ದಿನದೊಳಗೆ ಉದ್ಘಾಟನೆ ಮಾಡಿ ಸಾರ್ವಜನಿಕ ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಯಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಕರುಣಾಕರ , ಉಪಾಧ್ಯಕ್ಷೆ ಜಯ ಮುರುಗೇಶ್ , ಬಿಜೆಪಿ ಮೇಗುಂದಾ ಹೋಬಳಿ ಅಧ್ಯಕ್ಷ ಕಾರ್ತಿಕ್ , ಪ್ರಧಾನ ಕಾರ್ಯದರ್ಶಿ ಹಾಲಪ್ಪ , ಪಂಚಾಯತಿ ಸದಸ್ಯರಾದ ಸಂಪತ್ , ವೆಂಕಟೇಶ್ , ಪ್ರವೀಣ್ , ರಮ್ಯ , ನಳಿನಿ , ಶ್ರೀನಿವಾಸ , ಶಕುಂತಲಾ ಮುಖಂಡರಾದ ಧರ್ಮರಾಜ್ , ಮಂಜು ಅಣ್ಣು , ಕುಮಾರ್, ಸುಧೀಂದ್ರ, ಯುವಮೋರ್ಚಾ ಅಧ್ಯಕ್ಷ ಸಂದೇಶ್ ಹಾಗೂ ಅನೇಕರಿದ್ದರು.