ಇತ್ತೀಚಿನ ಸುದ್ದಿ
Chikkamagaluru | ಬಣಕಲ್ ಪ್ರೌಢ ಶಾಲೆಯಲ್ಲಿ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಪರಿಕಲ್ಪನೆಗೆ ಮಂಗಳ: ಇನ್ನು ಎಲ್ಲವೂ ಫಸ್ಟ್ ಬೆಂಚ್!
22/07/2025, 16:16

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡಲ್ಲಿ ಹೊಸ ಮಾದರಿಯ ತರಗತಿಗಳ ಆರಂಭಕ್ಕೆ ಮುನ್ನುಡಿ ಬರೆಯಲಾಗಿದೆ. ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢ ಶಾಲೆಯಲ್ಲಿ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಎಂಬ ವ್ಯಾಖ್ಯಾನಕ್ಕೆ ಮಂಗಳ ಹಾಡಲಾಗಿದೆ.
ಬಣಕಲ್ ಪ್ರೌಢ ಶಾಲೆಯಲ್ಲಿ ವೃತ್ತಾಕಾರದಲ್ಲಿ ತರಗತಿಗಳನ್ನ ಆರಂಭಿಸಲಾಗಿದೆ. ಆರಂಭಿಕವಾಗಿ 8ನೇ ತರಗತಿಗೆ ಸೆಮಿ ಸರ್ಕಲ್ ತರಗತಿಗಳ ಆರಂಭಿಸಲಾಗಿದೆ.ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಮೂಡಿಸಲು ಲಾಸ್ಟ್ ಬೆಂಚ್ ಟು ಫಸ್ಟ್ ಬೆಂಚ್ ಮಾದರಿ ಆರಂಭಿಸಲಾಗಿದೆ.
ಶಿಕ್ಷಕರು ಎಲ್ಲಾ ಮಕ್ಕಳ ಮೇಲೂ ಗಮನ ಹರಿಸಲು ಈ ಮಾದರಿ ಉಪಯುಕ್ತ ಎನ್ನಲಾಗಿದೆ. ಮಕ್ಕಳು ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗಿಯಾಗಿ ಚರ್ಚೆ-ಗ್ರಹಿಕೆಗೆ ಈ ಮಾದರಿ ಅನುಕೂಲವಾಗಿದೆ. ಹೊಸ ಪರಿಕಲ್ಪನೆಯ ತರಗತಿಗೆ ಪೋಷಕರು-ಮಕ್ಕಳಲ್ಲಿ ಹುಮ್ಮಸ್ಸು ಮೂಡಿಸಿದೆ.