ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಮಾತ್ರೆ ಖರೀಸುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ದಾರುಣ ಸಾವು; ಸಿಸಿಟಿವಿಯಲ್ಲಿ ಸೆರೆ
01/07/2025, 14:03

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಾತ್ರೆ ಖರೀಸುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ನಗರದ ದೀಪಾ ನರ್ಸಿಂಗ್ ಹೋಂ ಬಳಿಯ ಮೆಡಿಕಲ್ ಶಾಪ್ ನಲ್ಲಿ ನಡೆದಿದೆ.
ಮೃತರನ್ನು ವಿಶ್ವನಾಥ್ (65) ಎಂದು ಗುರುತಿಸಲಾಗಿದೆ.
ಜೂನ್ 26ರಂದು ಈ ಘಟನೆ ನಡೆದಿದೆ.
ಮಾತ್ರೆ ತೆಗೆದುಕೊಂಡು ನೀರು ಕುಡಿಯುವಾಗಲೇ ಹೃದಯಾಘಾತವಾಗಿದೆ.
ಹೃದಯಾಘಾತವಾಗಿ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.