ಇತ್ತೀಚಿನ ಸುದ್ದಿ
ಚಿಕ್ಕಮಗಳೂರು ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದಂತೆ ಆದೇಶ: ಮಾರ್ಚ್ 23ರ ವರೆಗೆ ನಿರ್ಬಂಧ
24/01/2025, 23:52
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡು ಚಿಕ್ಕಮಗಳೂರಿನ ಹೃದಯ ಭಾಗದಲ್ಲಿ ಪ್ರತಿಭಟನೆ, ಧರಣಿಗೆ ಅವಕಾಶ ನಿರಾಕರಿಸಲಾಗಿದೆ. ಪ್ರತಿಭಟನೆ, ಧರಣಿ, ರಸ್ತೆ ತಡೆ ನಡೆಸಿದಂತೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ
ಆದೇಶ ಹೊರಡಿಸಿದ್ದಾರೆ.
ದಿಢೀರ್ ಪ್ರತಿಭಟನೆ, ಧರಣಿ, ಮುಷ್ಕರ, ರಸ್ತೆ ತಡೆಯಿಂದ ಜಿಲ್ಲಾಡಳಿತ ಹೈರಾಣು ಆಗಿರುವ ಹಿನ್ನೆಲೆಯಲ್ಲಿ
ಕಾನೂನು ಸುವ್ಯವಸ್ಥೆ ಪಾಲನೆಗೆ ಪ್ರತಿಭಟನೆ , ಮುಷ್ಕರ, ರಸ್ತೆ ತಡೆಗೆ ಬ್ರೇಕ್ ಹಾಕಲಾಗಿದೆ. ನಗರದ ಹೃದಯ ಭಾಗವಾದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದಂತೆ ಆದೇಶ ಹೊರಡಿಸಲಾಗಿದೆ.
ಹನುಮಂತಪ್ಪ ವೃತ್ತದಲ್ಲಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿ, ಬಡಾಮಖಾನ್ ದರ್ಗಾ ಕೂಡ ಇರುವುರಿಂದ ಕಾನೂನು ಸೂಕ್ಷ್ಮತೆಯಿಂದ ನಿರ್ಬಂಧದ ಆದೇಶ ನೀಡಲಾಗಿದೆ.
ರಾಜಕೀಯ ವಿವಿಧ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆ ಕೈಗೊಳ್ಳುವುದು ಕಷ್ಟಕರ ಎಂದು ಉಲ್ಲೇಖಿಸಲಾಗಿದೆ.
ಹನುಮಂತಪ್ಪ ವೃತ್ತದಲ್ಲಿ 100 ಮೀಟರ್ ಯಾವುದೇ ಪ್ರತಿಭಟನೆ, ಧರಣಿ ನಡೆಸಿದಂತೆ ನಿರ್ಬಂಧಿಸಲಾಗಿದೆ. ಮಾರ್ಚ್ 23ರ ವರೆಗೂ ನಿರ್ಬಂಧ ವಿಧಿಸಿ
ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗಾರಾಜ್ ಆದೇಶ ಹೊರಡಿಸಿದ್ದಾರೆ.